ಮೊಬೈಲ್ ನಲ್ಲಿ ಆಮಿಷ ತೋರಿಸಿ ಸೈಬರ್ ವಂಚಕರು ಸಾರ್ವಜನಿಕರಿಗೆ ಲೋನ್ ನೀಡುತ್ತೇವೆ ಎಂದು ಸುಳ್ಳು ಹೇಳುತ್ತಾರೆ ಅಂತವರ ಬಗ್ಗೆ ಜಾಗೃತರಾಗಿ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಎಲ್ ಸೌಮ್ಯ
ನಾಯಕನಹಟ್ಟಿ-: ಮೊಬೈಲ್ ವಾಟ್ಸಪ್ ಇನ್ಸ್ಟಾಗ್ರಾಂ ಫೇಸ್ಬುಕ್ ನಲ್ಲಿ ಲೋನು ನೀಡುತ್ತೇವೆ ಎಂದು ನಾವು ಬ್ಯಾಂಕಿನಿಂದ ಕರೆ ಮಾಡುತ್ತೇವೆ ಎಂದು ಮೋಸದ ಜಾಲ ಬೀಸಿ ಸಾರ್ವಜನಿಕರ ಹಣ ಲೂಟಿ ಮಾಡುವ ವಂಚಕರ ಸಂಖ್ಯೆ ಇತ್ತೀಚಿಗೆ ಜಾಸ್ತಿಯಾಗಿದೆ ಹಾರ್ದಿಕ ಸಾಕ್ಷರತಾ ಸಲಹೆಗಾರರಾದ ಎಲ್ ಸೌಮ್ಯ ಹೇಳಿದರು.
ಸೋಮವಾರ ಪಟ್ಟಣದ ಮೈರಾಡ ಕಚೇರಿಯಲ್ಲಿ ಲೀಡ್ ಬ್ಯಾಂಕ್ ಚಿತ್ರದುರ್ಗ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಅಮೂಲ್ಯ ಹಾರ್ದಿಕ ಸಾಕ್ಷರತಾ ಕೇಂದ್ರ ಕೆನರಾ ಆರ್ಥಿಕ ಸಲಹಾ ಟ್ರಸ್ಟ್ ಬೆಂಗಳೂರು ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಮೊಬೈಲ್ ನಲ್ಲಿ ಮೆಸೇಜ್ ಲಿಂಕ್ ಕಳಿಸಿ ನಿಮಗೆ ಬಹುಮಾನ ಗೆದ್ದಿದ್ದೀರಾ ಎಂದು ಸುಳ್ಳು ಸುದ್ದಿ ಹಬ್ಬಿಸಿ ನಿಮ್ಮನ್ನು ವಂಚನೆ ಮಾಡುತ್ತಾರೆ ಆದ್ದರಿಂದ ಪ್ರತಿಯೊಬ್ಬರೂ ಮೊಬೈಲ್ ಬಳಸುವಾಗ ಎಚ್ಚರವಹಿಸಿ ಎಂದರು.
ಇದೇ ವೇಳೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಟಿ ಮಂಜುಳಾ ಶ್ರೀಕಾಂತ್ ಮಾತನಾಡಿದರು ಬಡ ಜನರಿಗೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಸದೃಢರಾಗಲು ಅನೇಕ ಜನಪರ ಯೋಜನೆಯನ್ನು ಜಾರಿಗೆ ತಂದಿದೆ ಪ್ರತಿ ವರ್ಷಕ್ಕೆ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಅಡಿ ಒಬ್ಬ ವ್ಯಕ್ತಿ ರೂ. 20 ಇನ್ಸೂರೆನ್ಸ್ ಕಟ್ಟಬಹುದು ಮತ್ತು 436 ರೂಪಾಯಿ ಹಣವನ್ನ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಅಡಿಯಲ್ಲಿ ಇನ್ಸೂರೆನ್ಸ್ ಮಾಡಿಸಬಹುದು ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳು ಶ್ರೀನಿವಾಸ್ ಮಾತನಾಡಿದರು
ಈ ಸಂದರ್ಭದಲ್ಲಿ ಶ್ರೀ ತಿಪ್ಪೇರುದ್ರಸ್ವಾಮಿ ರೈತ ಉತ್ಪಾದನಾ ಕಂಪನಿ (ಲಿ) ನಾಯಕನಹಟ್ಟಿ ಅಧ್ಯಕ್ಷ ಸಿ ಮಂಜುನಾಥ್, ಉಪಾಧ್ಯಕ್ಷೆ ಭಾಗ್ಯಮ್ಮ, ನಿರ್ದೇಶಕರಾದ ಬಿ.ಟಿ. ಪ್ರಕಾಶ್ ಜಾಗನೂರಹಟ್ಟಿ , ರಾಜಣ್ಣ, ಬಸಣ್ಣ, ಮತ್ತು ನಾಯಕನಹಟ್ಟಿ ಕೆನರಾ ಬ್ಯಾಂಕ್ ಸಿಬ್ಬಂದಿ ಪ್ರಿಯಾಂಕಾ, ಸಿಇಒ ಜೋಗಿಹಟ್ಟಿ ಎಚ್. ಬಿ ತಿಪ್ಪೇಸ್ವಾಮಿ,
ಮೈರಾಡ ಉಸ್ತುವಾರಿ ವ್ಯವಸ್ಥಾಪಕರಾದ ಶ್ರೀಮತಿ ಲಕ್ಷ್ಮಮ್ಮ, ಅಕೌಂಟೆಂಟ್ ಟಿ ವಿಜಯಮ್ಮ, ಸೇರಿದಂತೆ ಗ್ರಾಮಸ್ಥರು ಇದ್ದರು

