ಪ್ರತಿಯೊಬ್ಬರೂ ಮನೆಯ ಸುತ್ತ ಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಆರೋಗ್ಯ ಕಡೆ ಗಮನ ಕೂಡಿ : ಮುಸ್ಠಲಗುಮ್ಮಿ ಪ್ರಾಥಮಿಕ ಆರೋಗ್ಯ ನೀರಕ್ಷಣಾಧಿಕಾರಿ ಅಶೋಕ

ನಾಯಕನಹಟ್ಟಿ ::
ಅಬ್ಬೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರತಿ ಹಳ್ಳಿಯ ಜನರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕೆಂದು ಮುಸ್ಠಲಗುಮ್ಮಿ ಪ್ರಾಥಮಿಕ ಆರೋಗ್ಯ ನೀರಕ್ಷಣಾಧಿಕಾರಿ ಅಶೋಕ ಹೇಳಿದರು.
ಗುರುವಾರ ಅಬ್ಬೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಿಣಗಿ ಹಳ್ಳದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ ಜಿಲ್ಲಾ ರೋಗ ವ್ಯಾಪಾಕ ಅಶ್ರಿತಾ ರೋಗಗಳ ನಿಯಂತ್ರಣ ಅಧಿಕಾರಿಗಳ ಕಛೇರಿ ಚಿತ್ರದುರ್ಗ ತಾಲ್ಲೂಕು ಆರೋಗ್ಯಧಿಕಾರಿಗಳ ಕಛೇರಿ ಚಳ್ಳಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ಮುಸ್ಠಲಗುಮ್ಮಿ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಡೆಂಗೀ ಕಾರ್ಯಕ್ರಮವನ್ನು ಉದ್ದೇಶಿ ಮಾತಾನಾಡಿದರು.
ವಾತಾವರಣ ವೈಪರಿತದಿಂದ ಮಳೆಗಾಲ ಪ್ರಾರಂಭವಾಗಿದ್ದು ರಸ್ತೆ ತಂಗು ಗುಂಡಿಗಳಲ್ಲಿ ಚರಂಡಿಗಳಲ್ಲಿ ನೀರು ಸಂಗ್ರಹವಾಗದಂತೆ ಪ್ಲಾಸಿಕ್‌ ವಸ್ತುಗಳಲ್ಲಿ, ತೆಂಗಿನ ಚಿಪ್ಪುಗಳಲ್ಲಿ ನೀರು ಸಂಗ್ರಹಣೆ ಆಗದಂತೆ ನೋಡಿಕೊಳ್ಳುಬೇಕು ಲಾರವುಗಳು ಬೆಳೆಯದಂತೆ ಎಚ್ಚರವಹಿಸಿ ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಸಿ ಮನೆಯ ಸುತ್ತ ಮುತ್ತ ಘನತಾಜ್ಯ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎಂದು ನರೇಗಾ ಕೂಲಿ ಕಾರ್ಮಿಕರಿಗೆ ಜಾಗೃತಿ ಮೂಡಿಸಿದರು.
ಇದೇ ಸಂಧರ್ಭದಲ್ಲಿ ಅಬ್ಬೇನಹಳ್ಳಿ ಗ್ರಮ ಪಂಚಾಯ್ತಿ ಸದಸ್ಯರಾದ ಪಡ್ಲ ಬೋರಯ್ಯ, ಶೇಖರ್‌ ಗೌಡ, ಕೂಲಿ ಕಾರ್ಮಿಕರಾದ ಬಿ ಪಾಲಯ್ಯ, ನಲಜರವಯ್ಯ, ಪಿ ಬಿ ಮಹಾಂತೇಶ, ಈ ಮಲ್ಲಿಕಾರ್ಜುನ, ಎಂ ಸಿದ್ದಪ್ಪ, ರುದ್ರಮುನಿ, ಅಬ್ಬೇನಹಳ್ಳಿ ಗ್ರಾಮ ಪಂಚಾಯ್ತಿ ಬಿಎಫ್‌ಟಿ ಶಿವಕುಮಾರ್‌, ಮುಸ್ಠಲಗುಮ್ಮಿ ಮುಸ್ಠಲಗುಮ್ಮಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯಧಿಕಾರಿ ನಯನ ಕುಮಾರಿ, ಆಶಾಕಾರ್ಯಕರ್ತೆರಾದ ಸರೋಜಮ್ಮ, ಈಶಮ್ಮ ಸೇರಿದಂತೆ ನರೇಗಾ ಕೂಲಿ ಕಾರ್ಮಿಕರು ಇದ್ದರು.

About The Author

Namma Challakere Local News
error: Content is protected !!