ಚಳ್ಳಕೆರೆ : ಬೆಸ್ಕಾಂ ಇಲಾಖೆಗೆ ನೂತನವಾಗಿ ವಿದ್ಯುತ್ ಕಂಬ ಹಾಗೂ ಪರಿವರ್ತಕಗಳನ್ನು ಒಂದು ಕಡೆಯಿಂದ ಒಂದು ಕಡೆಗೆ ಸ್ಥಳಾಂತರಿಸಲು ರೈತರಿಗೆ ಅನುಕೂಲವಾಗಲು ಹೊಸ ವಾಹನಕ್ಕೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು.

ನಗರದ ಚಿತ್ರದುರ್ಗ ರಸ್ತೆಯಲ್ಲಿರುವ ಬೆಸ್ಕಾಂ ಕಚೇರಿ ಆವರಣದಲ್ಲಿ ಹೊಸ ಲಾರಿಗೆ ಹಸಿರು ನಿಶಾನೆ ತೋರಿ ಮಾತನಾಡಿದ ಅವರು,

ಚಳ್ಳಕೆರೆ ಹಾಗೂ ಮೊಳಕಾಲ್ಮುರು ಗಡಿಭಾಗದ ತಾಲೂಕುಗಳು ಇಲ್ಲಿನ ರೈತರಿಗೆ ವಿದ್ಯುತ್ ಪರಿವರ್ತಕ ಹಾಗೂ ಅತಿ ಅವಶ್ಯಕವಾಗಿ ಬೆಸ್ಕಾಂ ಉಪ ವಿಭಾಗ ಕಚೇರಿ ತೆರೆಯಲು ಈಗಾಗಲೇ ಪತ್ರರವಾನೆ ನಡೆದಿದೆ.

ಗಡಿಭಾಗದಿಂದ ಹಿರಿಯೂರು ಬೆಸ್ಕಾಂ ಕಚೇರಿಗೆ ರೈತರು ಕೆಟ್ಟು ಹೋದ ಟ್ರಾನ್ಸ್ಫರ್ ಪೇಟಿಗೆಗಳನ್ನು ಬಹು ಸಾಗಿಸಲು ದೂರ ಇರುವುದರಿಂದ ಸಾಗಾಟ ವೆಚ್ಚ ಹಾಗೂ ಇನ್ನಿತರ ಖರ್ಚುಗಳನ್ನು ರೈತರಿಂದ ಬರಿಸಲು ಸಾಧ್ಯವಾಗುವುದಿಲ್ಲ ಆದ್ದರಿಂದ ಸ್ಥಳೀಯವಾಗಿ ಮೊಳಕಾಲ್ಮೂರು ಚಳ್ಳಕೆರೆ ವಿಭಾಗದಲ್ಲಿ ಸಬ್ ಡಿವಿಷನ್ ಕೇಂದ್ರವನ್ನು ನಿರ್ಮಿಸಲು ಸಂಬಂಧಪಟ್ಟ ಸಚಿವರ ಜೊತೆಗೆ ಚರ್ಚಿಸಿ ಪತ್ರರವಾನೇ ನಡೆಸಿದ್ದೇವೆ ಎಂದು ಹೇಳಿದರು

ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಂಜುಳಾ ಪ್ರಸನ್ನ ಕುಮಾರ್, ಉಪಾಧ್ಯಕ್ಷ ಕವಿತಾ ಬೋರಯ್ಯ,
ಬೆಸ್ಕಾಂ ಸಹಾಯಕ ನಿರ್ದೇಶಕ ಶಿವಪ್ರಸಾದ್, ಲೈನ್ ಮ್ಯಾನ್ ಸಿಬ್ಬಂದಿ ವರ್ಗ ಬೆಸ್ಕಾಂ ಕಂಟ್ರಾಕ್ಟರ್ ಗಳು ಹಾಗೂ ಸಾರ್ವಜನಿಕರು ಇನ್ನಿತರರು ಭಾಗವಹಿಸಿದ್ದರು

About The Author

Namma Challakere Local News
error: Content is protected !!