ಚಳ್ಳಕೆರೆ : ಕೈಕೊಟ್ಟ ವಿದ್ಯುತ್ ಒಣಗುತ್ತಿರುವ ಬೆಳೆ , ರೈತ ಕಂಗಾಲು ಹೌದು ಇದು ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ರೇಣುಕಾಪುರ ಗ್ರಾಮದ ಉಮೇಶ್ ಸೇರಿದಂತೆ ಎಂಟು ಜನ ರೈತರ ಕೊಳವೆ ಬಾವಿಯಲ್ಲಿ ನೀರಿದ್ದರೂ ವಿದ್ಯುತ್ ಕಂಬಳು ಪರಿವರ್ತಕ ಸಮೇತ ನೆಲಕ್ಕೆ ಬಿದ್ದು ಸುಮಾರು 15 ದಿನಗಳು ಕಳೆದರೂ ವಿದ್ಯುತ್ ಪರಿವರ್ತಕ ದುರಸ್ಥಿಯಾಗದೆ ಇರುವುದರಿಂದ ಕೊಳವೆ ಬಾವಿಯಲ್ಲಿ ನೀರಿದ್ದರೂ ಕಟಾವಿಗೆ ಬಂದ ಬೆಳೆಗಳಿಗೆ ನೀರಿಲ್ಲದೆ ಒಣಗಲು ಪ್ರಾರಂಭಿಸಿವೆ.
ಈಗಾಗಲೆ ರೈತರು ಅತಿ ವೃಷ್ಠಿ ಅನಾವೃಷ್ಠಿಗೆ ಸಿಲುಕಿ ಬೆಳೆಗಳನ್ನು ಕಳೆದು ಕೊಂಡು ಸಾಲದ ಸುಳಿಗೆ ಸಿಲುಕುವಂತಾಗಿದ್ದು ಬೆಸ್ಕಾಂ ಇಲಾಖೆ ನಿರ್ಲಕ್ಕೆ ಕಟಾವಿಗೆ ಬಂದ ಬೆಳೆಗಳು ಒಣಗಲು ಪ್ರಾರಂಭಿಸಿದ್ದು ಅನ್ನದಾತರು ಕಂಗಾಲಾಗಿದ್ದಾರೆ.
ರೈತ ಉಮೇಶ್ ಸಂಕಷ್ಟಕ್ಕೆ ಬೆಸ್ಕಾ ಇಲಾಖೆ ಅಧಿಕಾರಿಗಳು ವಿದ್ಯುತ್ ಪರಿವರ್ತಕ ದುರಸ್ತಿ ಪಡಿಸಿ ಅನ್ನದಾತರ ನೆರವಿಗೆ ದಾವಿಸಬೇಕು ಎಂಬುದು ನಮ್ಮ ಚಳ್ಳಕೆರೆ ಟಿವಿ, ಯ ಕಳಕಳಿ.

