ಚಳ್ಳಕೆರೆ ತಾಕೂಕಿನ ಸೋಮಗುದ್ದು ಗ್ರಾಮಪಂಪಿಡಿಒ ಹನುಂಮತಪ್ಪ ಇವರನ್ನು ಕರ್ತವ್ಯ ಲೋಪದಡಿಯಲ್ಲಿ ಅಮಾನತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆಕಾಶ್ ಆದೇಶ ಹೊರಡಿಸಿದ್ದಾರೆ.

ಚಳ್ಳಕೆರೆ ನಗರದ ತಾಲೂಕು ಪಂಚಾಯತ್
ಕಾರ್ಯಾಲಯದಲ್ಲಿ ಶಾಸಕ ಟಿ.ರಘುಮೂರ್ತಿಯವರ ಅಧ್ಯಕ್ಷತೆಯಲ್ಲಿ ಸೆ.19 ರಂದು ನಡೆದ
ತ್ರೈಮಾಸಿಕ ಕೆಡಿಪಿ ಸಭೆಯನ್ನು ಆಯೋಜಿಸಲಾಗಿದ್ದು, ಸದರಿ ಸಭೆಗೆ ಪಿಡಿಓ
ಹನುಮಂತಪ್ಪ
ಪೂರ್ವನುಮತಿ ಪಡೆಯದ ಅನಧಿಕೃತವಾಗಿ ಗೈರು.
ಗ್ರಾಮಪಂಚಾಯಿತಿ ಕಚೇರಿಗೂ ಪೂರ್ವಾನುಮತಿ ಪಡೆಯದ ಅನಧಿಕೃತವಾಗಿ ಗೈರು
ಹಾಜರಾಗಿರುವುದು ಹಾಗೂ ಗಂಜಿಗುಂಟೆ
ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮಾಡಲು 5.00 ಎಕರ
ಜಮೀನು ಮಂಜೂರಾಗಿದ್ದು, ಅರ್ಹರಿರುವ ಫಲಾನುಭವಿಗಳನ್ನು ಆಯ್ಕೆ ಮಾಡಲು ಗ್ರಾಮ ಸಭೆ ನಡೆಸಿ ಆಯ್ಕೆಯಾದ ಫಲಾನುಭವಿಗಳ ವಿವರವನ್ನು ಇದುವರೆವಿಗೂ
ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡದೆ ಇರುವುದು ತನಿಖೆಯಿಂದ ಬೆಳೆಕಿಗೆ ಬಂದಿದ್ದು ಕರ್ತವ್ಯ
ಲೋಪದಡಿ , ಕರ್ನಾಟಕ ನಾಗರೀಕ ಸೇವಾ (ನಡವಳಿ)
ನಿಯಮ ಉಲ್ಲಂಘಿಸಿರುವುದು, ಕಂಡು ಬಂದಿರುವ ಕಾರಣ ಪಿಡಿಒ ಹನುಮಂತಪ್ಪ ಇವರನ್ನು ಜಿಪಂ ಸಿಇಒ ಡಾ ಆಕಾಶ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಒಂದೇ ತಿಂಗಳಲ್ಲಿ ಇಬ್ಬರು ಪಿಡಿಒ ಗಳು ಅಮಾನತು ಆಗಿರುವುದು ಬೆಳಕಿಗೆ ಬಂದಿದೆ.

About The Author

Namma Challakere Local News
error: Content is protected !!