ಚಳ್ಳಕೆರೆ :

ಜನರ ಜೀವದ ಜೊತೆ ಚೆಲ್ಲಾಟ ಹಾಡುವ ಸ್ಥಳೀಯ ಅಧಿಕಾರಿಗಳು

ಹೌದು ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಸ್ವಚ್ಚತೆ ಎನ್ನುವುದು ಮರಿಚೀಕೆಯಾಗಿದೆ,

ಕಳೆದ ಹಲವು ದಿನಗಳಿಂದ ಚರಂಡಿಯ‌ ಕೊಳಚೆ ನೀರು ಮುಂದಕ್ಕೆ ಹೋಗದೆ ನಿಂತಲ್ಲಿಯೇ ನಿಂತು ಗೊಬ್ಬು ವಾಸನೆ ಬೀರುತ್ತಿದೆ.

ಇನ್ನೂ ಮನೆಯ ಅಕ್ಕಪಕ್ಕದ ಜನರು ಎಷ್ಟೋ ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಕ್ಯಾರೆ ಎನ್ನದ ಇಲ್ಲಿನ‌ ಅಧಿಕಾರಿಗಳ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರು ರಕ್ಷಣೆಗೆ ಸ್ಥಳೀಯ ಆಡಳಿತ ಅಧಿಕಾರಿಗಳು ಮುಂದಾಗುವುದು ಸರಕಾರದ ನಿರ್ದೇಶನ ಆದರೆ ಇಲ್ಲಿ ಮಾತ್ರ ಬೇರೆನೆ ಇದೆ.

ಚರಂಡಿಯ ಕೊಳಚೆ ನೀರು ಮುಂದಕ್ಕೆ ಹೋಗದೆ ನಿಂತಲ್ಲಿಯೆ‌ ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ.

ದಿನ ಸಂಜೆಯಾದರೆ ಸೊಳ್ಳೆಗಳ‌ ಕಾಟದಿಂದ ಡೆಂಗ್ಯೂ , ಮಲೇರಿಯಾ, ಈಗೇ ಭಯಾನಕ ಖಾಯಿಲಿಗೆ ತುತ್ತಾಗುವ ಆತಂಕ ಇಲ್ಲಿನ ಸ್ಥಳೀಯರಲ್ಲಿ ಕಾಡುತ್ತಿದೆ.

ಇತ್ತ ಸ್ಥಳೀಯ ಅಧಿಕಾರಿಗಳ‌ ನಿರ್ಲಕ್ಷ್ಯ ಕ್ಕೆ ಮೇಲಾಧಿಕಾರಿಗಳ ಬೇಟಿ ಅನಿವಾರ್ಯವಾಗಿದೆ .

ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಚರಂಡಿ ಸ್ವಚ್ಚತೆ ಮುಂದಾಗಿ ಚರಂಡಿಯ ಕೊಳಚೆ ನೀರು ಮುಂದಕ್ಕೆ ಸರಾಗವಾಗಿ ಹರಿಯುವಂತೆ ಮಾಡಿ ಸಾರ್ವಜನಿಕರು ರಕ್ಷಣೆಗೆ ಮುಂದಾಗಬೇಕಿದೆ.

About The Author

Namma Challakere Local News
error: Content is protected !!