“ಮಹಾತ್ಮರ ಜಯಂತಿಗಳು ಜಾತ್ಯತೀತವಾಗಿ ಆಚರಿಸಲ್ಪಡಬೇಕು”-ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅಭಿಪ್ರಾಯ.

ಚಳ್ಳಕೆರೆ-ಮಹಾತ್ಮರ ಜಯಂತಿಗಳನ್ನು ಜಾತ್ಯತೀತವಾಗಿ ಆಚರಿಸುವ ಅಗತ್ಯವಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಪ್ರಾಯಪಟ್ಟರು.

ಶಿವನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಜಗಜ್ಯೋತಿ ಬಸವೇಶ್ವರರ 892ನೇ ಜಯಂತ್ಯುತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಬಸವಣ್ಣನವರ ಜೀವನ ಮತ್ತು ಸಂದೇಶಗಳ ಬಗ್ಗೆ ಉಪನ್ಯಾಸ ನೀಡಿದರು.

ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ಅವರು ಬಸವಣ್ಣನವರ ಜೀವನ ಮತ್ತು ವಚನಗಳ ಪ್ರಸ್ತುತತೆಯ ಬಗ್ಗೆ ಮಾತನಾಡಿದರು. ಬಸವ ಜಯಂತಿಯ ಪ್ರಯುಕ್ತ ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಎಂ ಗೀತಾ ನಾಗರಾಜ್ ಅವರು ಬಸವಣ್ಣನವರ ಕುರಿತ ಭಜನೆಗಳನ್ನು ಹಾಡಿದರು.ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿ ಸ್ತುತಿ ಪಠಣ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು.ಈ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಪ್ರೇಮಲೀಲಾ ರಾಮಣ್ಣ, ಜಯಶೀಲಮ್ಮ,ಶೈಲಜ ಶ್ರೀನಿವಾಸ್,ಪಿ.ಎಸ್, ಮಾಣಿಕ್ಯ ಸತ್ಯನಾರಾಯಣ, ಕೃಷ್ಣವೇಣಿ ವೆಂಕಟೇಶ್, ರಶ್ಮಿ ರಮೇಶ್, ವಿಜಯಲಕ್ಷ್ಮೀ, ಶಾರದಾಮ್ಮ, ಸಂಗೀತ ವಸಂತಕುಮಾರ್, ಭ್ರಮರಂಭಾ,ಗೀತಾಲಕ್ಷ್ಮೀ, ಯುಕ್ತ,ನಿಖಿಲೇಶ್ ಯಾದವ್ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!