“ಅಗಾಧ ಜ್ಞಾನ-ಶಕ್ತಿ ಸಂಪನ್ನ ಸ್ವಾಮಿ ವಿವೇಕಾನಂದರು”- ಮಾತಾಜೀ ತ್ಯಾಗಮಯೀ ಅಭಿಮತ.
ಚಳ್ಳಕೆರೆ-ಸ್ವಾಮಿ ವಿವೇಕಾನಂದರು ಅಗಾಧ ಜ್ಞಾನ-ಶಕ್ತಿ ಸಂಪನ್ನರಾಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ತಿಳಿಸಿದರು.ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ “ವಿಶ್ವಗುರು ಸ್ವಾಮಿ ವಿವೇಕಾನಂದ”ಎಂಬ ಪ್ರವಚನ ಮಾಲಿಕೆಯ ದಿವ್ಯ ಸಾನಿಧ್ಯ ವಹಿಸಿ ಅವರು ‘ಸ್ವಾಮಿ ಸದಾಶಿವಾನಂದ’ರ ಸ್ಮೃತಿಗಳ ಬಗ್ಗೆ ವಿಶೇಷ ಪ್ರವಚನ ನೀಡಿದರು.
ಈ ಪ್ರವಚನದ ಆರಂಭದಲ್ಲಿ ಶ್ರೀಮದ್ ಭಗವದ್ಗೀತೆಯ ಶ್ಲೋಕಗಳನ್ನು ಚಿರಂಜೀವಿ ನಂದನ್ ವಿಶೃತ್ ಮತ್ತು ಕುಮಾರಿ ಪ್ರತೀಕ್ಷಾ ಅವರು ಪಠಿಸಿದರು.
ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ ಮತ್ತು ಆರತಿ ನಡೆಯಿತು.ಈ ಸತ್ಸಂಗ ಸಭೆಯಲ್ಲಿ ಸದ್ಭಕ್ತರಾದ ಎಂ ಲಕ್ಷ್ಮೀ ವಂಶಿ, ಸರಸ್ವತಮ್ಮ ಗೋವಿಂದರಾಜು, ರತ್ನಮ್ಮ ಚೆನ್ನಬಸಪ್ಪ, ಗೀತಾ ನಾಗರಾಜ್, ಯತೀಶ್ ಎಂ ಸಿದ್ದಾಪುರ, ಜಿ.ಯಶೋಧಾ ಪ್ರಕಾಶ್,ಸಿ.ಎಸ್ ಭಾರತಿ,ಪಂಕಜ ಚೆನ್ನಪ್ಪ, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಗೀತಾ ವೆಂಕಟೇಶರೆಡ್ಡಿ, ಚೇತನ್,ಉಷಾ ಶ್ರೀನಿವಾಸ್, ದೀಪ ರಾಘವೇಂದ್ರ, ಮನೀಷ್,ಚಂದನ್, ವೀಣಾ ಮಂಜುನಾಥ,ವಿದ್ಯಾ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

