ಚಳ್ಳಕೆರೆ :
ರಾಜ್ಯದಲ್ಲಿರುವ ಎಲ್ಲಾ ಮಹಾನಗರ ಪಾಲಿಕೆ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ
ನೌಕರರ ಬೇಡಿಕೆಗಳನ್ನು ಈಡೇರಿಸದೇ ಇರುವುದರಿಂದ ದಿನಾಂಕ:27/05/2025 ರಿಂದ ಅನಿರ್ಧಿಷ್ಟ
ಕಾಲ ಮುಷ್ಕರ ಮಾಡಲಾಗುತ್ತದೆ ಎಂದು ಚಳ್ಳಕೆರೆ ನಗರಸಭೆ ಪೌರನೌಕರ ಸೇವೆಯಲ್ಲಿ ಕಪ್ಪು ಪಟ್ಟಿ ಕಟ್ಟಿ ಸೇವೆ ಸಲ್ಲಿಸಿದ್ದಾರೆ.

ರಾಜ್ಯದಲ್ಲಿರುವ ಎಲ್ಲಾ ಮಹಾನಗರ
ಪಾಲಿಕೆ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಬೇಡಿಕೆಗಳನ್ನು ಈಡೇರಿಸುವುದು ಮುಖ್ಯ ಉದ್ದೇಶ ವಾಗಿದೆ.

ಕರ್ನಾಟಕ ರಾಜ್ಯ ಪೌರ ನೌಕರರ ಸಂಘ (ರಿ) ವತಿಯಿಂದ ಪೌರ ವೃಂದದ ನೌಕರರ ಪ್ರಮುಖ
ಬೇಡಿಕೆಗಳಾದ ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವುದು ಹಾಗೂ ಕೆ.ಜಿ.ಐ.ಡಿ, ಜಿ.ಪಿ.ಎಫ್,
ಜ್ಯೋತಿ ಸಂಜೀವಿನಿ, ಸೇರಿದಂತೆ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯವನ್ನು ಪೌರ ನೌಕರರಿಗೂ ಜಾರಿ
ಮಾಡುವುದು ಹಾಗೂ ಸುಮಾರು 25-30 ವರ್ಷಗಳಿಂದ ಹೊರಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿರುವ ನೀರು
ಸರಬರಾಜು ಸಿಬ್ಬಂದಿಗಳು, ಲೋಡರ್, ಗುತ್ತಿಗೆ ಲೆಕ್ಕಿಗರು, ಕ್ಲೀನರ್ಸ್ ಪೌರಕಾರ್ಮಿಕರು, ಸೂಪರ್‌ವೈಸರ್,
ಕಂಪ್ಯೂಟರ್ ಆಪರೇಟರ್, ಜ್ಯೂನಿಯರ್ ಪ್ರೋಗ್ರಾಮರ್, ಇನ್ನಿತರೆ ಗುತ್ತಿಗೆ/ಹೊರಗುತ್ತಿಗೆ ಮೂಲಕ ಕಾರ್ಯ
ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ನೇರವಾದ ವೇತನ ಮಾಡುವುದು.

ಖಾಯಂ ಮಾಡುವುದು, ಹೊಸದಾಗಿ
2022-23 ನೇ ಸಾಲಿನಲ್ಲಿ ಪೌರಕಾರ್ಮಿಕರ ವಿಷೇಶ ನೇಮಕಾತಿಯಡಿ ಪೌರಕಾರ್ಮಿಕರು ನೇಮಕಾತಿ ಹೊಂದಿದ್ದು,
ಸದರಿ ನೌಕರರಿಗೆ ಮಾನ್ಯ ಘನ ಸರ್ಕಾರವು ನಗರ ಸ್ಥಳೀಯ ಸಂಸ್ಥೆಯ ಸ್ಥಳೀಯ ನಿಧಿಯಿಂದ ವೇತನ ಪಡೆಯಲು
ಆದೇಶಿಸಿಲಾಗಿದ್ದನ್ನು ರದ್ದುಪಡಿಸಿ, ಎಸ್.ಎಫ್.ಸಿ
ರದ್ದುಪಡಿಸಿ, ಎಸ್.ಎಫ್.ಸಿ ಅನುದಾನದಡಿ ವೇತನವನ್ನು ನೀಡುವುದು,

ಇತ್ಯಾದಿ
ಸೌಲಭ್ಯಗಳನ್ನು ಪಡೆಯಲು ಹಂತ ಹಂತವಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿರುವುದರಿಂದ ಎಲ್ಲ
ಬೇಡಿಕೆಗಳ ಈಡೇರಿಕೆಗಾಗಿ ಚರ್ಚಿಸಿ ರಾಜ್ಯ ಸಭೆಯಲ್ಲಿ ತೀರ್ಮಾನಿಸಿ ದಿನಾಂಕ:11/04/2025ರಂದು ಸರ್ಕಾರಕ್ಕೆ
ಮನವಿ ಪತ್ರವನ್ನು ಸಲ್ಲಿಸಿ ಪ್ರಥಮ ಹಂತದಲ್ಲಿ ದಿನಾಂಕ: 12-04-2025 ರಿಂದ 26-05-2025 ರವರೆಗೆ

ಯಾವುದೇ ರೀತಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ 45 ದಿನಗಳವರೆಗೆ ಬಲಗೈ ತೋಳಿಗೆ ಕಪ್ಪು ಬಟ್ಟೆ
ಧರಿಸಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿರುತ್ತದೆ.

ಮೇಲ್ಕಾಣಿಸಿದ ಕಾನೂನುಬದ್ಧ ಬೇಡಿಕೆಗಳನ್ನು ಈಡೇರಿಸದೇ ಇರುವುದರಿಂದ ನಗರ ಸ್ಥಳೀಯ ಸಂಸ್ಥೆಗಳ
ದೈನಂದಿನ ಕಚೇರಿ ಕೆಲಸಗಳನ್ನು ಹಾಗೂ ಸ್ವಚ್ಛತೆ ಕೆಲಸವನ್ನು ನೀರು ಸರಬರಾಜು ಮತ್ತು ಬೀದಿ ದೀಪ
ನಿರ್ವಹಣೆಯನ್ನು ಸ್ಥಗಿತಗೊಳಿಸಿ

ದಿನಾಂಕ:27-05-2025 ರಿಂದ ಅನಿರ್ಧಿಷ್ಟಕಾಲ ಮುಷ್ಕರ ಮಾಡಲಾಗುವುದು
ಎಂಬ ವಿಷಯವನ್ನು ಮಾನ್ಯರ ಅವಗಾಹನೆಗಾಗಿ ಈ ಮೂಲಕ ವಿನಯಪೂರ್ವಕವಾಗಿ ಸಲ್ಲಿಸಲಾಗಿದೆ.

About The Author

Namma Challakere Local News
error: Content is protected !!