“ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ವಿದ್ಯಾರ್ಥಿ ಶಿಬಿರ”.
ಚಳ್ಳಕೆರೆ:-ನಗರದ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ವಿಶೇಷ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಭಾಗವಾಗಿ ಮಕ್ಕಳಿಗೆ ಭಜನೆ,ಶ್ರೀಮದ್ ಭಗವದ್ಗೀತೆಯ ಶ್ಲೋಕಗಳನ್ನು, ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಮುತ್ತುಗಳ ಪಠಣ ಹಾಗೂ ರಸಪ್ರಶ್ನಾ ಕಾರ್ಯಕ್ರಮವನ್ನು ನಡೆಸಲಾಯಿತು
. ಶಿಬಿರದ ದಿವ್ಯ ಸಾನಿಧ್ಯವನ್ನು ಆಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸ್ವಯಂಸೇವಕರಾದ ಸಂತೋಷಕುಮಾರ್ ಅಗಸ್ತ್ಯ,ಡಾ.ಭೂಮಿಕ, ಯತೀಶ್ ಎಂ ಸಿದ್ದಾಪುರ, ಜಿ.ಯಶೋಧಾ ಪ್ರಕಾಶ್ , ಬಸವರಾಜ್. ವಿದ್ಯಾರ್ಥಿಗಳಾದ ಹರ್ಷಿತಾ, ಪ್ರತೀಕ್ಷಾ,ಲಕ್ಷ್ಮೀ, ಯಶಸ್ವಿ ,ಧ್ರುವ ನಾರಾಯಣ, ನಿಖಿಲೇಶ್ ಯಾದವ್, ದೈವಿಕ್,ಯಶಸ್ಸ್, ದವನ್,ವಿವಿಕ್ತಾ ಸೇರಿದಂತೆ ಇತರರಿದ್ದರು. ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

