ಚಳ್ಳಕೆರೆ : ಅಕ್ರಮ ಪಡಿತರ ತುಂಬಿದ ಲಾರಿ ಪೋಲಿಸ್ ಠಾಣೆಗೆ ..! ರಾತ್ರೋ ರಾತ್ರಿ ಬಿಡುಗಡೆ..?
ನಿಜವಾಗಿಯೂ ಅಕ್ರಮ ರಾಗಿಯೋ, ಪರವಾನಗಿ ಪಡೆದ ಪಡಿತರ ರಾಗಿಯೋ..??
ಸಾರ್ವಜನಿಕ ವಲಯದಲ್ಲಿ ಪಿಸು ಮಾತು ಜೋರು..?
ಚಳ್ಳಕೆರೆ : ರಾತ್ರೋ ರಾತ್ರಿ ಪೋಲಿಸ್ ಠಾಣೆಯಿಂದ ಅಕ್ರಮವಾಗಿ ಪಡಿತರ ರಾಗಿ ತುಂಬಿದ ಲಾರಿಯನ್ನು ಬಿಡುಗಡೆಗೊಳಿಸಿದರ ಹಿಂದೆ ಕಾಣದ ಕೈಗಳ ಕೈವಾಡ ಅಡಗಿದೆ ಎಂದು ತಾಲೂಕಿನಲ್ಲಿ ಪಿಸುಮಾತು ಜೋರಾಗಿದೆ.
ಹೌದು ಜು.15 ರಂದು ಕರವೇ ನೇತೃತ್ವದಲ್ಲಿ ಪರವಾನಗಿ ಇಲ್ಲದೆ ಸರಕಾರಿ ಗೋದಾಮಿನಿಂದ ಅಕ್ರಮವಾಗಿ ಖಾಸಗಿ ಲಾರಿಗೆ ಸು.200 ಟನ್ ರಾಗಿ ತುಂಬಿದ ಲಾರಿಯನ್ನು
ಪೋಲಿಸ್ ಠಾಣೆಗೆ ತಂದು ನಿಲ್ಲಿಸಿದ ಲಾರಿಯನ್ನು ಬಿಡುಗಡೆ ಗೊಳಿಸಿದರ ಹಿಂದೆ ಯಾವ ಉದ್ದೇಶವಿದೆ, ಒಂದು ವೇಳೆ ಅಕ್ರಮ ನಡೆದಿಲ್ಲವಾದರೆ ಪೋಲಿಸ್ ಠಾಣೆಗೆ ಲಾರಿ ಬರುವ ಅಗತ್ಯವಾದರು ಏನಿತ್ತು, ಅಧಿಕಾರಿಗಳು ಒಳಸಂಚಿಗೆ ಖಾಕಿ ಮರುಗಿತೆ, ಖಾಸಗಿ ಲಾರಿಗೆ ಪರವಾನಗಿ ಇಲ್ಲದೆ ಸು.200 ಟನ್ ಪಡಿತರ ರಾಗಿ ತುಂಬಿದ ಲಾರಿ ಬೇರೆಡೆಗೆ ರವಾನಿಸಲು ಸಜ್ಜಾಗಿದ್ದ ಲಾರಿಗೆ ಕರವೇ ಪದಾಧಿಕಾರಿಗಳು ತಡೆದು ಪೋಲಿಸ್ ಠಾಣೆಗೆ ಒಪ್ಪಿಸಿದ್ದಾರೆ, ಆದರೆ ತಾಲ್ಲೂಕು ಆಹಾರ ನಿರೀಕ್ಷಕರು ,ಹಾಗೂ ತಹಶಿಲ್ದಾರ್ ತಂಡ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಬೇಕಿತ್ತು , ಆದರೆ ಇದ್ಯಾವುದು ಮಾಡದೆ ಕೇವಲ ಎರಡು ದಿನ ಬಿಟ್ಟು ದಾಖಲೆಗಳನ್ನು ಸೃಷ್ಠಿಸಿಕೊಂಡು ನಂತರ ಪೋಲಿಸ್ ಠಾಣೆಗೆ ದಾಖಲೆ ಸಲ್ಲಿಸಿರುವುದು ಮೇಲ್ನೋಟಕ್ಕೆ ಅಕ್ರಮ ಎಂಬುದು ಗೋಚರಿಸುತ್ತಿದೆ.
ಒಂದು ವೇಳೆ ಪರವಾಗಿ ಪಡೆದಿದ್ದಾರೆ ಸರಕಾರಿ ಗೋದಾಮಿನಿಂದ ಪೋಲಿಸ್ ಠಾಣೆಗೆ ಲಾರಿ ಬರುವ ಅಗತ್ಯವಾದರು ಏನಿತ್ತು.. ಎಂಬುದು ಪ್ರಜ್ಞಾನವಂತ ನಾಗರೀಕರ ಯಕ್ಷ ಪ್ರಶ್ನೆ ಯಾಗಿದೆ.
ಇನ್ನೂ ಪೋಲಿಸ್ ಠಾಣಾ ಇನ್ಸ್ಪೆಕ್ಟರ್ ಕೆ.ಕುಮಾರ್ , ರವರನ್ನು ನಮ್ಮ ಚಳ್ಳಕೆರೆ TV, ಸಂಪರ್ಕಿದಾಗ , ಸರಕಾರಿ ಗೋದಾಮಿನಿಂದ ಖಾಸಗಿ ಲಾರಿಗೆ ರಾಗಿ ತುಂಬುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಹಾಗೂ ಕರವೇ ಪದಾಧಿಕಾರಿಗಳು ಮಾಹಿತಿ ನೀಡಿದಾಗ ಕೂಡಲೇ ರಾಗಿ ತುಂಬಿದ ಲಾರಿಯನ್ನು ಪೋಲಿಸ್ ಸುಪರ್ದಿಗೆ ಪಡೆದು ದಾಖಲಾತಿಗಳ ಪರೀಶಿಲನೆಗೆ ತಹಶಿಲ್ದಾರ್ ಮೂಲಕ ಮಾಹಿತಿ ಪಡೆದು ನಂತರ ಸೂಕ್ತ ದಾಖಲಾತಿಗಳು ನೀಡಿದಾಗ ಮಾತ್ರ ಲಾರಿಯನ್ನು ಬಿಡುಗಡೆ ಗೊಳಿಸಲಾಯಿತು.
ಇನ್ನೂ ಇದೇ ತರ ಸರಕಾರದ ಮಹತ್ವಕಾಂಕ್ಷಿ ಯೋಜನೆ ಅನ್ನಭಾಗ್ಯ ಯೋಜನೆ ದುರಳರ ಪಾಲಾಗುವುದನ್ನು ಸಂಬಂಧಿಸಿದ ಅಧಿಕಾರಿಗಳು ಕಂಡರು ಕಾಣದಂತೆ ಇರುವುದು ಯಾವ ಉದ್ದೇಶಕ್ಕೆ , ಸ್ಥಳೀಯ ಆಡಳಿತ ಪಕ್ಷದ ಶಾಸಕರ ತವರಿನಲ್ಲೆ ಇಂತಹ ಘಟನೆಗಳು ಜರುಗುತ್ತಿರುವುದು ಆಡಳಿತದ ಯಂತ್ರ ಅವ್ಯವಸ್ಥೆ ಅದಗೆಟ್ಟಿದೆ ಎಂಬುದು ಕಂಡುಬರುತ್ತದೆ…
ಇನ್ನಾದರೂ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಬಡಜನರಿಗೆ ಸರಕಾರದ ಸೌಲಭ್ಯ ಸಿಗುವಂತೆ ಅಕ್ರಮ ಪಡಿತರ ರವಾನಿಗೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.


