ಶಿಕ್ಷಣವು ವ್ಯಕ್ತಿಯ ಜೀವನದಲ್ಲಿ ಸ್ಥಿರತೆಯನ್ನು ತರುತ್ತದೆ : ಶಾಸಕ ಟಿ.ರಘುಮೂರ್ತಿ.

ಚಳ್ಳಕೆರೆ: ಶಿಕ್ಷಣವು ವ್ಯಕ್ತಿಯ ಹಾಗೂ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಅಡಿಪಾಯವಾಗಿದೆ ಶಿಕ್ಷಣಕ್ಕೆ ಇರುವಂತಹ ಮಹತ್ವ ಮತ್ತೆ ಯಾವುದಕ್ಕೂ ಇಲ್ಲ ಎಂದು ಶಾಸಕ ಟಿ .ರಘುಮೂರ್ತಿ ಹೇಳಿದರು.

ಅವರು ನಗರದ ಶ್ರೀ ಕೃಷ್ಣ ಗೊಲ್ಲರ ವಿದ್ಯಾರ್ಥಿ ನಿಲಯದಲ್ಲಿ ನಡೆದ ಕಾಡುಗೊಲ್ಲರ ಸರ್ಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಎಸ್ ಎಸ್ ಎಲ್ ಸಿ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,

ಶಿಕ್ಷಣವು ವ್ಯಕ್ತಿತ್ವ ವಿಕಸನ, ವಿಮರ್ಶಾತ್ಮಕ ಚಿಂತನೆ, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸಮಾಜದಲ್ಲಿ ಉತ್ತಮ ಹಕ್ಕುಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ, ಉದ್ಯೋಗಾವಕಾಶಗಳನ್ನು ಹೆಚ್ಚಿಸಿ ಆರ್ಥಿಕ ಸ್ಥಿರತೆಯನ್ನು ನೀಡುತ್ತದೆ ಮತ್ತು ಸಮಾಜದಲ್ಲಿ ಬದಲಾವಣೆ ತರಲು ಪ್ರೇರೇಪಿಸುತ್ತದೆ, ಸಮಾಜದಲ್ಲಿ ಪ್ರತಿಭಾವಂತರಾಗಿ ಇಲ್ಲಿ ಸನ್ಮಾನ ಸ್ವೀಕರಿಸುತ್ತೀರಾ ಎಂದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ, ಪ್ರತಿಯೊಬ್ಬರು ಮಕ್ಕಳಿಗೆ ಶಿಕ್ಷಣ ಕೊಡಲು ಪೋಷಕರು ಉತ್ಸುಕ ತೋರಬೇಕು ಎಂದರು.

ಇನ್ನೂ ಗೊಲ್ಲರ ಸಂಘದ ತಾಲ್ಲೂಕು ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ರವಿಕುಮಾರ್ ಮಾತನಾಡಿ, ಮಕ್ಕಳಿಗೋಸ್ಕರ ಆಸ್ತಿ ಮಾಡಬೇಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ, ಚಿಕ್ಕವರಿದ್ದಾಗಲೇ ಅವರಿಗೆ ಉತ್ತಮ ಶಿಕ್ಷಣ ಜೊತೆಗೆ ಸಂಸ್ಕಾರ ಕಲಿತರೆ ಮುಂದಿನ ಅವರು ಉತ್ತಮ ಪ್ರಜೆಯಾಗಿ ಹೊರಹೊಮ್ಮುತ್ತಾರೆ. ಶಾಸಕರು ಇಂತಹ ಶಿಕ್ಷಣಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ಎಂದರು.

ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷರಾದ ಗದ್ದಿಗೆ ತಿಪ್ಪೇಸ್ವಾಮಿ ಮಾತನಾಡಿ, ಕಾಡುಗೋಲ ನೌಕರ ಸಂಘದಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಶ್ಲಾಘನೀಯ, ಮಕ್ಕಳ ಶಿಕ್ಷಣ ಅಭಿವೃದ್ದಿಗೆ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು…

ನಗರಸಭೆ ಅಧ್ಯಕ್ಷೆ ಶಿಲ್ಪ ಮುರಳಿ ಮಾತನಾಡಿ ಶಿಕ್ಷಣವು ವೈಯಕ್ತಿಕ ಬೆಳವಣಿಗೆಯೊಂದಿಗೆ ಸಮಾಜ ಮತ್ತು ಜಾಗತಿಕ ಪ್ರಗತಿಗೆ ನಿರ್ಣಾಯಕವಾಗಿದೆ. ಶಿಕ್ಷಣಕ್ಕೆ ಸಿಕ್ಕಂತಹ ಅವಕಾಶಗಳನ್ನು ಬಳಸಿಕೊಂಡು ಉತ್ತಮ ರಾಷ್ಟ್ರ ನಿರ್ಮಾಣ ಮಾಡಲು ಸಂಕಲ್ಪ ಮಾಡಬೇಕು ಎಂದರು.

ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಶಾಂತಮ್ಮ, ನಿವೃತ್ತ ಪ್ರಾಂಶುಪಾಲ ಮೂಡಲಗಿದ್ಯಪ್ಪ, ಗೊಲ್ಲನೌಕರ ಸಂಘದ ಕಾರ್ಯದರ್ಶಿ ನಾಗರಾಜ್ ಪ್ರೊಫೆಸರ್ ಡಾ.. ಮಂಜುನಾಥ್, ಮಾತನಾಡಿದರು..

ಈ ಕಾರ್ಯಕ್ರಮದಲ್ಲಿ ಗೊಲ್ಲ ನೌಕರ ಸಂಘದ ತಾಲೂಕು ಅಧ್ಯಕ್ಷರಾದ ಶ್ರೀಕಾಂತ್ , ಕಾಡುಗೊಲ್ಲರ ತಾಲ್ಲೂಕು ಅಧ್ಯಕ್ಷ ಕೆ.ವಿರಭದ್ರಪ್ಪ,ಡಿಜೆ. ಕಾಡುಗುಲ್ಲರ ಸಂಘದ ಕಾರ್ಯದರ್ಶಿ ಮಿರಸಾಬಿಹಳ್ಳಿ ಸುರೇಶ, ಆನಂದ ಸಂಪತ್ತಕುಮಾರ್. ಡಿ.ವೀರಣ್ಣ, ಅಕ್ಷರ ದಾಸೋಹ ಅಧಿಕಾರಿ ಮಂಜುನಾಥಸ್ವಾಮಿ,ತಿಪ್ಪೇಸ್ವಾಮಿ,ಪಿಡಿಓ ನರಸಿಂಹಮೂರ್ತಿ, ಶಿಕ್ಷಕಿ ಜಯಮ್ಮ, ಚಾರುಮತಿ, ಶಿಕ್ಷಕ ವೆಂಕಟೇಶ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರಪ್ಪ ವೀರಣ್ಣ ಸಿದ್ದಪುರ ಮಂಜುನಾಥ್ ನೌಕರ ಸಂಘದ ಪದಾಧಿಕಾರಿಗಳು ಕಾಡುಗೊಲ್ಲ ಸಂಘದ ಮುಖಂಡರು ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ನಿರುತ್ತಾ ಸರ್ಕಾರಿ ನೌಕರರು ಇದ್ದರು….

ಪೋಟೋ : 1, ಚಳ್ಳಕೆರೆ ನಗರದ ಶ್ರೀ ಕೃಷ್ಣ ಗೊಲ್ಲರ ವಿದ್ಯಾರ್ಥಿ ನಿಲಯದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನವನ್ನು ಶಾಸಕ ಟಿ.ರಘುಮೂರ್ತಿ ಮಾಡಿದರು.

About The Author

Namma Challakere Local News
error: Content is protected !!