ಚಳ್ಳಕೆರೆ :
ಮಧ್ಯ ಕರ್ನಾಟಕ ಆರಾಧ್ಯ ದೇವಿ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆ ಬಯಲು ಸೀಮೆಯಲ್ಲಿ ಒಂದು ತಿಂಗಳ ಕಾಲ ಆಚರಿಸುವ ಮೂಲಕ ದೇವಿ ಕೃಪೆಗೆ ಪಾತ್ರರಾಗುತ್ತಾರೆ.
ಅದರಂತೆ ಒಂದು ತಿಂಗಳ ಕಾಲ ಪ್ರತಿ ಮಂಗಳವಾರ ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹರಕೆ ತೀರಿಸುವ ಭಕ್ತರು ಬಾಡೂಡ ಸವಿಯುತ್ತಾರೆ.
ಅಂತೆಯೇ ಚಳ್ಳಕೆರೆ ನಗರದಲ್ಲಿ ಮೂರನೇ ಮಂಗಳವಾರ ದೇವಿ ಜಾತ್ರೆಗೆ ಹರಕೆ ತೀರಿಸುವ ಸಲುವಾಗಿ ಕುರಿ ಮೇಕೆ ಟಗರು ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯಿತು.
ಕಳೆದ ಬಾರಿಗಿಂತ ಈ ಬಾರಿ ಟಗರುಗಳು ಹೆಚ್ಚಿನ ಬೆಲೆಗೆ ಖರಿದಿಯಾದವು.
ಇನ್ನೂ ವ್ಯಾಪಾರ ವಹಿವಾಟು ನಗರದ ಬಳ್ಳಾರಿ ರಸ್ತೆಯ ರೀಂಗ್ ರೋಡ್ ನಲ್ಲಿ ತಾಲೂಕಿನ ವಿವಿಧ ಹಳ್ಳಿಗಳಿಂದ ಬಂದ ವ್ಯಾಪಾರಸ್ಥರು ತಮ್ಮ ಟಗರು ಮಾರಾಟಕ್ಕೆ ಇಟ್ಟಿದ್ದರು.
ಅದರಂತೆ ಮಾರಮ್ಮ ದೇವಿ ಹಬ್ಬಕ್ಕೆ ದೊಡ್ಡ ದೊಡ್ಡ ಟಗರುಗಳು ಉತ್ತಮ ಬೆಲೆಯಲ್ಲಿ ಮಾರಾಟ ವಾದವು, ಇನ್ನೂ ಮಂಗಳೂರು ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆ ಅಂಗವಾಗಿ ನಗರದ ತುಂಬೆಲ್ಲ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ.

