ಚಳ್ಳಕೆರೆ : ಸಂವಿಧಾನ ವಿಚಾರ ವೇದಿಕೆ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದ ಪ್ರಕರಣಕ್ಕೆ ನಗರದ ತಾಲೂಕು ಕಛೇರಿಯಲ್ಲಿ ತಹಶಿಲ್ದಾರ್ ಗೆ ಮನವಿ ಸಲ್ಲಿಸಿ ಮಾತನಾಡಿದರು.
ಇತ್ತೀಚಿಗೆ ದೇಶದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಗುರಿಯಾಗಿಸಿ
ವಾಗ್ದಾಳಿ ನಡೆಸಿದ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ಉದಾಹರಣೆಯಾಗಿ ವಕ್ಸ್ ಕಾಯ್ದೆಯ
ಸಿಂಧುತ್ವ ಪ್ರಶ್ನಿಸಿರುವ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದಕ್ಕಾಗಿ ಸಂಸದ ನಿಶಿಕಾಂತ್ ದುಬೆ
ಅವರು ಸುಪ್ರೀಂ ಕೋರ್ಟ್‌ಅನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು.
ಸುಪ್ರೀಂ ಕೋರ್ಟ್
ದೇಶವನ್ನು ಅರಾಜಕ ಸ್ಥಿತಿಯತ್ತ ಒಯ್ಯುತ್ತಿದೆ ಎಂದು ಆರೋಪಿಸಿದ್ದರು ಮತ್ತ ದೇಶದಲ್ಲಿನ ನಾಗರೀಕ
ಸಮಾಜಕ್ಕೆ ಸಿಜೆಐ ಸಂಜೀವ್ ಖನ್ನಾ ಅವರು ಹೊಣೆ ಎಂದು ಆರೋಪಿಸಿದ್ದರು.
ನಿಶಿಕಾಂತ್ ದುಬೆ
ಅವರ ಆರೋಪದ ಬಗ್ಗೆ ಸುಪ್ರೀಂ ಕೋರ್ಟ್ ಕಿವಿ ಹಿಂಡುವುದರ ಮೂಲಕ ಎಚ್ಚರಿಕೆ ನೀಡಿತ್ತು.
ಸುಪ್ರೀಂ ಕೋರ್ಟ್‌ನ ಮುಖ್ಯ
ನ್ಯಾಯಾಧೀಶರಾದ ಬಿ.ಆರ್.ಗವಾಯಿ ಅವರು, ನ್ಯಾಯಾಲಯದ ತಮ್ಮ ಆಸನದಲ್ಲಿ ಕುಳಿತು
ಪ್ರಕರಣಗಳ ಬಗ್ಗೆ ವಿಚಾರಣೆ ಮಾಡುವ ಸಂದರ್ಭದಲ್ಲಿ ಹಿರಿಯ ವಕೀಲ ರಾಕೇಶ್ ಕಿಶೋರ್
ಎಂಬುವವನು ಬಿ.ಆರ್. ಗವಾಯಿ ರವರು ಶೂ ಎಸೆಯುವುದರ ಮೂಲಕ ಮುಖ್ಯ ನ್ಯಾಯಾಧೀಶರ
ಸ್ಥಾನಕ್ಕೆ ಅಗೌರವ ಪಡಿಸುವುದರ ಮೂಲಕ ತನ್ನ ಅಹಂಕಾರ ಮತ್ತು ಉದ್ಧಟತನವನ್ನು
ಪ್ರದರ್ಶಿಸಿರುತ್ತಾನೆ. ಶೂ ಎಸೆದ ಘಟನೆ ಕೇವಲ ಮುಖ್ಯ ನ್ಯಾಯಾಮೂರ್ತಿ ಬಿ.ಆರ್.ಗವಾಯಿ
ಅವರನ್ನು ಅವಮಾನಸಿದಂತಹ ಕೃತ್ಯವಲ್ಲ ಬದಲಾಗಿ ಇಡೀ ದೇಶದ ನ್ಯಾಯಾಂಗಕ್ಕೆ ಮತ್ತು
ಸಂವಿಧಾನಕ್ಕೆ ಅವಮಾನಸಿದಂತಹ ಘಟನೆಯಾಗಿದೆ.
ಈ ಕೃತ್ಯವನ್ನು ಖಂಡಿಸಿ
ದೇಶದಾದ್ಯಂತ ಅನೇಕ ಕಡೆಗಳಲ್ಲಿ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಬೀದಿಗಿಳಿದು
ಹೋರಾಟ ನಡೆಸುವುದರ ಮೂಲಕ ಮುಖ್ಯ ನ್ಯಾಯಮೂರ್ತಿಗಳು ಶೂ ಎಸೆದ ಆರೋಪಿ ವಕೀಲನ
ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಮುಖ್ಯ
ನ್ಯಾಯಾಮೂರ್ತಿಗಳು ಶೂ ಎಸೆದ ಘಟನೆಯನ್ನು ಪ್ರಧಾನ ಮಂತ್ರಿಗಳ ಕಛೇರಿ
ಗಂಭೀರವಾಗಿ ಪರಿಗಣಿಸಬೇಕು.
ಮೇಲೆ
ಕಠಿಣ
ಈಗಾಗಲೇ
ಈ ಘಟನೆಯನ್ನು ಅತ್ಯುಗ್ರವಾಗಿ ನಮ್ಮ ಸಂಘಟನೆ ಖಂಡಿಸುತ್ತದೆ ಮತ್ತು ಮುಖ್ಯ
ನ್ಯಾಯಮೂರ್ತಿಗಳತ್ತ ಶೂ ಎಸೆದ ಆರೋಪಿ ವಕೀಲನ ಮೇಲೆ ಕಠಿಣವಾದ ಕ್ರಮ ಜರುಗಿಸ
ಬೇಕೆಂದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ
ರವರ ವಿರುದ್ಧ ವಿಕೃತವಾಗಿ ಟೀಕಿಸುವವರ ಮೇಲೆ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡು
ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು, ಸಂವಿಧಾನದ ಗೌರವವನ್ನು ರಕ್ಷಿಸಬೇಕೆಂದು ಮತ್ತು
ದೇಶದ ಎಲ್ಲಾ ನ್ಯಾಯಾಲಯಗಳ ನ್ಯಾಯಮೂರ್ತಿಗಳಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸುತ್ತಾ
ದಿನಾಂಕ:14-10-2025 ರಂದು ಈ ಮನವಿ ಪತ್ರವನ್ನು ತಹಶೀಲ್ದಾರ್‌ರವರ ಕಾರ್ಯಾಲಯ
ಚಳ್ಳಕೆರೆ ಇವರ ಮೂಲಕ ಪ್ರಧಾನ ಮಂತ್ರಿಗಳ ಕಛೇರಿ ನವದೆಹಲಿ ಇವರಿಗೆ ಸಲ್ಲಿಸುತ್ತಿದ್ದೇವೆ.

