ಹೃದಯಘಾತದಿಂದ ಹಾಸ್ಯ ಕಲಾವಿದ ರಾಜು ತಾಳೆಕಕೋಟೆ ನಿಧನ ಕಲಾವಿದರ ಬಳಗದಿಂದ ಸಂತಾಪ..
ಚಳ್ಳಕೆರೆ :ರಂಗಭೂಮಿ, ಸಿನಿಮಾ, ಸೇರಿದಂತೆ ಹಲವಾರು ಹಾಸ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟಂತಹ ಹಿರಿಯ ಕಲಾವಿದ ಹಾಗೂ ಹಾಸ್ಯ ನಟ ರಾಜು ತಾಳೆಕೋಟೆ ಇವರ ಸಾವು ರಂಗಭೂವಿಗೆ ತಂಬಲಾರದಷ್ಟು ನಷ್ಟವಾಗಿದೆ .ದೇವರ ಅವರ ಕುಟುಂಬಕ್ಕೆ ನಾವು ಭರಿಸುವಶಕ್ತಿ ನೀಡಿಲಿ ಹಾಗೂ ರಾಜು ತಾಳೆಕೊಟೆ ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಲಾವಿದ ಮುತ್ತುರಾಜ್ ಹೇಳಿದರು..
ಚಳ್ಳಕೆರೆ ಪ್ರವಾಸ ಮಂದಿರದಲ್ಲಿ ಚಳ್ಳಕೆರೆ ರಂಗಭೂಮಿ ಹಾಗೂ ಮುತ್ತುರಾಜ್ ಕಲಾಬಳಗದ ವತಿಯಿಂದ ಹೆಸರಂತ ರಂಗಭೂಮಿ ಕಲಾವಿದ ಚಲನಚಿತ್ರ ಹಾಸ್ಯ ನಟರಾದ ರಾಜು ತಾಳಿಕೋಟಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ
ಅವರು ಮಾತನಾಡಿದರು..
ಈ ಕಾರ್ಯಕ್ರಮದಲ್ಲಿ ರಂಗಭೂಮಿಯ ಹಿನ್ನೆಲೆ ಗಾಯಕರಾದ ಮುತ್ತುರಾಜ್ ರಂಗಭೂಮಿ ಕಲಾವಿದರಾದ ಜೋಗಿ ,ಬಂಗಾರಿ ಬುಡ್ನಟ್ಟಿ ,ಬೋರಣ್ಣ ರಾಜಣ್ಣ ಮುಂತಾದ ಕಲಾವಿದರು ಇದ್ದರು…

