ಚಳ್ಳಕೆರೆ :
ಚಳ್ಳಕೆರೆ: ಶೇಂಗಾ ಈರುಳ್ಳಿ ಬಿತ್ತನೆ ಕಾರ್ಯ ಅಂತಿಮ
ಹಂತ ತಲುಪಿದೆ
ಚಳ್ಳಕೆರೆಯ ಪ್ರಮುಖ ಬೆಳೆಗಳಾದ ಶೇಂಗಾ ಮತ್ತು ಈರುಳ್ಳಿ
ಬಿತ್ತನೆ ಕಾರ್ಯ, ಬಹುತೇಕ ಅಂತಿಮ ಹಂತ ತಲುಪಿದೆ ಎಂದು
ರೈತ ಮುಖಂಡ ಕೆಪಿ ಭೂತಯ್ಯ ಹೇಳಿದರು. ಚಳ್ಳಕೆರೆಯಲ್ಲಿಂದು
ಲೋಕಲ್ ಆಪ್ ಗೆ ಮಾತಾಡಿ, ಕಳೆದ ಬಾರಿ ಈರುಳ್ಳಿ ಬೆಳೆಗೆ
ಉತ್ತಮ ಬೆಲೆ ಸಿಕ್ಕಿರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ
ಈ ಬಾರಿಯೂ ಆ ರೀತಿ ಆಗಬಾರದು, ಅದರಂತೆ ಉತ್ತಮ ಮಳೆ
ಬಂದಿದ್ದು, ಮುಂದೆಯೂ ಮಳೆಯಾಗುವ ನಿರೀಕ್ಷೆಯಲ್ಲಿದ್ದೇವೆ.
ಆದ್ದರಿಂದ ಈ ಬಾರಿ ಉತ್ತಮ ಬೆಲೆ ಸಿಗುವ ನಿರೀಕ್ಷೆಯಿದೆ ಎಂದು
ತಿಳಿಸಿದ್ದಾರೆ.

