ಚಡ್ಡಿಗ್ಯಾಂಗ್ ನಿಂದ ಮನೆ ಕಳ್ಳತನ ಮನೆಯಲ್ಲಿದ್ದ 700 ರೂ ಕಳ್ಳತನ…..
ಚಳ್ಳಕೆರೆ : ನಡು ರಾತ್ರಿ ವೇಳೆಯಲ್ಲಿ ಕೈಯಲ್ಲಿ ಕಬ್ಬಿಣ ರಾಡ್, ಇಡಿದು ರಾಜಾರೋಷವಾಗಿ ಬೀದಿಯಲ್ಲಿ ಕಂಡ ಕಂಡ ಮನೆಯ ಬಾಗಿಲು ಮುರಿದು ಕಳ್ಳತನ ಮಾಡು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನೂ ಆರು ಜನ ಕಳ್ಳರು ಚಡ್ಡಿ ಧರಿಸಿರುವುದು ಕೈಯಲ್ಲಿ ಆಯುಧ ಇರುವುದು ಕಂಡ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.
ತಡರಾತ್ರಿ ಸುಮಾರು ಆರು ಜನ ಇರುವ ಕಳ್ಳರ ಗುಂಪೊಂದು ಮನೆಯ ಬಾಗಿಲಿನ ಬೀಗ ಮುರಿದು ಒಳ ನುಗ್ಗಿ ಮನೆಯಲ್ಲಿದ್ದ ಬೀರು ಇತರೆ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿಮಾಡಿ ಹೋಗಿದ್ದರೆ ಕಳ್ಳತಕ್ಕೆ ವಿಫಲ ಯತ್ನ ನಡೆದಿತ್ತು……ಎನ್ನಲಾಗಿದೆ.
ಅಕ್ಕ ಪಕ್ಕದ ಮನೆಯವರು ಬೆಳಿಗ್ಗೆ ವಕೀಲರ ಮನೆಯ ಬಾಗಿಲು ತೆರೆದಿರುವುದನ್ನ ಕಂಡು ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ… ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಟಿ.ಬಿ ರಾಜಣ್ಣ ,ಪೊಲೀಸ್ ಇನ್ಸ್ಪೆಕ್ಟರ್ ಕೆ. ಕುಮಾರ್ ಸೇರಿದಂತೆ ಪಿಎಸ್ಐ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಲಾಗಿ. ಮನೆಯ ಮುಂಭಾಗಲು ಇಂಟರ್ಲಾಕ್ ಮುರಿದು ಒಳ ನುಗ್ಗಿದ ಕಳ್ಳರು ಮನೆಯೆಲ್ಲ ಜಡಲಾಡಿದ ಮನೆಯಲ್ಲಿದ್ದ ಕೇವಲ 700 ರೂಪಾಯಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಸಿಸಿ ಕ್ಯಾಮೆರಾ ನೋಡಲಾಗಿ ಆರು ಜನ ಇರುವ ತಂಡದ ಗುಂಪು ಕೈಯಲ್ಲಿ ಕೆಲವು ಆಯುಧ ಗಳನ್ನು ಹಿಡಿದು ಮನೆಯ ಒಳಗೆ ಹೋಗುವ ದೃಶ್ಯ ಮಾತ್ರ ಸೆರೆಯಾಗಿದೆ…
ಈ ಕಳ್ಳತನ ದಿಂದ ನಗರವೇ ಬೆಚ್ಚಿದಂತಾಗಿದೆ……

