ಚಿತ್ರದುರ್ಗ: ಚಳ್ಳಕೆರೆ ಶಾಸಕ ರಘುಮೂರ್ತಿಗೆ ಸಚಿವ
ಸ್ಥಾನ ನೀಡಿ
ಚಿತ್ರದುರ್ಗದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಕಿಸಾನ್
ಕಾಂಗ್ರೆಸ್ ಘಟಕದ ಅಧ್ಯಕ್ಷ ನಾಗರಾಜ್, ಚಳ್ಳಕೆರೆ ಶಾಸಕ ಟಿ.
ರಘುಮೂರ್ತಿ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಬೇಕೆಂದು
ಒತ್ತಾಯಿಸಿದರು. ಶಾಸಕರು ಅನೇಕ ಕಾಲೇಜುಗಳು, ಚೆಕ್
ಡ್ಯಾಂಗಳು, ರಸ್ತೆಗಳಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.
ಆದ್ದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾನ್ಯ
ಅಥವಾ ಎಸ್ಟಿ ಕೋಟಾದ ಅಡಿಯಲ್ಲಿಯಾದರೂ ಅವರಿಗೆ ಸಚಿವ
ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

