ಚಳ್ಳಕೆರೆ: ಪ್ರತಿಷ್ಠಿತ ಸುಕೋ ಬ್ಯಾಂಕ್ ನಿರ್ದೇಶಕರಾಗಿ ಚಿತ್ರದುರ್ಗ ಜಿಲ್ಲೆ
ಚಳ್ಳಕೆರೆಯ ಉದ್ಯಮಿ ಹಾಗೂ ಬಿಜೆಪಿ ಮುಖಂಡ ಬಾಳೆಕಾಯಿ
ರಾಮದಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ಶಾಖೆ ಸೇರಿದಂತೆ ರಾಜ್ಯಾದ್ಯಂತ ಶಾಖೆ
ಹೊಂದಿರುವ ಸುಕೋ ಸೌಹಾರ್ಧ ಸಹಕಾರ ಬ್ಯಾಂಕ್ ಆಡಳಿತ
ಮಂಡಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಕೋಟೆನಾಡು
ಚಿತ್ರದುರ್ಗ ಜಿಲ್ಲೆಗೆ ಪ್ರಾತಿನಿಧ್ಯ ದೊರೆತಿದೆ.

ಸುಕೋ ಬ್ಯಾಂಕ್‌ ಅಧ್ಯಕ್ಷರಾಗಿ ಸತತ ಮೂರನೇ ಅವಧಿಗೆ ಮೋಹಿತ್‌
ಮಸ್ಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸುಕೋ ಬ್ಯಾಂಕಿನಲ್ಲೇ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ
ಮೋಹಿತ್‌ ಮಸ್ಕಿ ಗ್ರಾಹಕರ ವಿಶ್ವಾಸದಿಂದ ಬ್ಯಾಂಕನ್ನು ಅಭಿವೃದ್ಧಿಯತ್ತ
ತೆಗೆದುಕೊಂಡು ಹೋಗಿದ್ದಾರೆ.

ಆರ್‌ಬಿಐ ನಿಯಮಾನುಸಾರ ಎಟಿಎಂ, ಮೊಬೈಲ್ ಬ್ಯಾಂಕಿಂಗ್,
ಯುಪಿಐ ಸೇರಿದಂತೆ ಹಲವು ಸುಧಾರಣೆಗಳನ್ನು ತಂದಿದ್ದಾರೆ.
ಈಗ ಈ ತಂಡದ ಜೊತೆಗೆ ಚಿತ್ರದುರ್ಗ ಜಿಲ್ಲೆಯಿಂದ ಬಾಳೆಕಾಯಿ
ರಾಮದಾಸ್ ಜೊತೆಯಾಗಿದ್ದಾರೆ. ಸಂಘ ಪರಿವಾರದ ಹಿರಿಯರಾಗಿರುವ
ರಾಮದಾಸ್ ಜೊತೆಯಾಗಿದ್ದಾರೆ.

ರಾಮದಾಸ್ ಅವರು ಆರೆಸ್ಸೆಸ್ಟ್ ವಿಎಚ್‌ಪಿ ಬಿಜೆಪಿಯಲ್ಲಿ ವಿವಿಧ
ಜವಾಬ್ದಾರಿಗಳನ್ನು ನಿರ್ವಹಿಸಿದವರು.

ಇದರೊಟ್ಟಿಗೆ ಬ್ಯಾಂಕ್‌ನ ಉಪಾಧ್ಯಕ್ಷರಾಗಿ ಕೃಷಿ ಸಲಕರಣೆಗಳ ವ್ಯಾಪಾರಿ
ಮುರಳೀಧರ ರೆಡ್ಡಿ, ಚಾರ್ಟೆಡ್ ಅಕೌಂಟೆಂಟ್ ಎಸ್.ವೆಂಕಟಕೃಷ್ಣನ್,
ಕೃಷಿ ಹಾಗೂ ಡೋಣ್ ಪರಿಣಿತ ಜಿ.ಮಹೇಂದ್ರ ಚೌದರಿ, ಜೈನ
ಸಮುದಾಯದ ಮುಖಂಡರಾದ ಪದಮ್ ಚಂದ್ ಮೆಹ್ರಾ ನಿವೃತ್ತ
ಐಎಎಸ್‌ ಅಧಿಕಾರಿ ಜಿ.ಎನ್.ಶಿವಮೂರ್ತಿ, ಸಹಕಾರಿ ಧುರೀಣರು
ಕಲಬುರಗಿ ವಿವಿ ಸೆನೆಟ್ ಸದಸ್ಯರಾಗಿರುವ ಪಿ.ಎಂ.ದಯಾವತಿ,
ಫೈನಾನ್ಶಿಯಲ್ ಸರ್ವೀಸ್‌ನ ಪದ್ಮಪ್ರಸಾದ್, ಟ್ರೇಡ‌ ಚನ್ನಬಸಮ್ಮ, ಸಿಎ ಕೆ.ರಾಜಶೇಖರ್ ಮತ್ತು ಆರ್‌ಬಿಐನ ನಿವೃತ್ತ ಅಧಿಕಾರಿ ವಾಸಂತಿ ಸಾಗ‌
ಅಧಿಕಾರ ಸ್ವೀಕರಿಸಿದ್ದಾರೆ..

About The Author

Namma Challakere Local News
error: Content is protected !!