ಚಳ್ಳಕೆರೆ :
ಚಿತ್ರದುರ್ಗ: ಕುಡಿಯೋ ನೀರಲ್ಲಿ ಬೆರೆಯುತ್ತಿರುವ
ಡ್ರೈನೇಜ್ ನೀರು
ಚಿತ್ರದುರ್ಗದ ಪ್ರಶಾಂತ್ ನಗರ ಬಡಾವಣೆಯಲ್ಲಿ ಕುಡಿಯೋ
ನೀರಿನಲ್ಲಿ ಡ್ರೈನೇಜ್ ನೀರು ಬೆರೆಯುತ್ತಿದ್ದು, ಇಲ್ಲಿನ ನಿವಾಸಿಗಳಿಗೆ
ಇದೇ ನೀರು ಕುಡಿವ ಪರಿಸ್ಥಿತಿ ಬಂದಿದೆ.
ನಲ್ಲಿ ಗುಂಡಿಯ
ಪಕ್ಕದಲ್ಲಿಯೇ ಡ್ರೈನೇಜ್ ನೀರು ಹರಿದು ಬರುತ್ತಿದೆ. ಅಂಬೇಡ್ಕರ್
ಕಲ್ಯಾಣ ಮಂಟಪದ ಕಡೆಯಿಂದ ನೀರು ಹರಿದು ಬರುತ್ತಿದ್ದು,
ನೇರವಾಗಿ ನಲ್ಲಿ ನೀರಿನಲ್ಲಿ ಬೆರೆಯುತ್ತಿದೆ. ಈ ಬಗ್ಗೆ ನಗರಸಭೆ
ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಡ್ರೈನೇಜ್ ನೀರು ಸೇವಿಸಿ
ಅನಾಹುತವಾಗುವ ಮೊದಲು ನಗರಸಭೆ ಎಚ್ಚೆತ್ತಿಕೊಳ್ಳಬೇಕಿದೆ.

