ಚಳ್ಳಕೆರೆ :ತಾಲೂಕಿನ ಬೆಳಗೆರೆ ಗ್ರಾಮದಲ್ಲಿ ನೆಲೆಸಿರುವ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಅಂಬಿನ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು..
ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಅಂಬಿನ ಮಹೋತ್ಸವ ನೂರಾರು ಭಕ್ತರ ನಡುವೆ ಸಡಗರ ಸಂಭ್ರಮದಿಂದ ಜರುಗಿದ್ದು.ಕುದರೆ ಪೂಜೆ ,ನಂತರ ಅಲಕೃತಗೊಂಡ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ಗ್ರಾಮದ ಬನ್ನಿ ಮಂಟಪ್ಪಕ್ಕೆ ಕರೆತಂದು ಸ್ವಾಮಿಗೆ ವಿವಿಧ ಪೂಜೆಯ ನಂತರ ಹಣ್ಣು ಕಾಯಿ ಕೊಟ್ಟು ಬನ್ನಿ ಮರಕ್ಕೆ ಬಾಣಗಳನ್ನು ಪ್ರಯೋಗ ಮಾಡುವ ಮೂಲಕ ಅಂಬಿನೋತ್ಸವನ್ನ ಆಚರಣೆ ಮಾಡಲಾಯಿತು.
ಪಟೇಲ್ ವಂಶಸ್ಥರಾದ ಗ್ರಾಮದ ಪಟೇಲ್ ಗೋಪಿನಾಥ್ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಗೆ ನಮಿಸಿ ಶಮಿ ಮರಕ್ಕೆ 6 ದಿಕ್ಕುಗಳಿಗೆ ಬಾಣಗಳ ಪ್ರಯೋಗ ಮಾಡುವ ಮೂಲಕ ಅಂಬಿನೋತ್ಸವ ಕಾರ್ಯಕ್ರಮ ನಡೆಸಿಕೊಟ್ಟರು.
ಪುರೋಹಿತರಾದ ಬಿಎಂ.ಮುರುಳಿಧರ್ ಇವರ ಪೂಜಾ ನೇತೃತ್ವದಲ್ಲಿ ಲಕ್ಷ್ಮಿ ರಂಗನಾಥ ಸ್ವಾವಿಯ ಅಭಿನೋತ್ಸವ ಜರುಗಿತು ಪ್ರತಿಯೊಬ್ಬರೂ ಬನ್ನಿ ಪತ್ರೆಯನ್ನ ಪರಸ್ಪರ ವಿನಿಮಯ ಮಾಡಿಕೊಂಡರು ಗ್ರಾಮದ ಮುಖ್ಯಸ್ಥರು ಯುವಕರು ಮಹಿಳೆಯರು ಅಭಿನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು.. ..

