ಚಳ್ಳಕೆರೆ:-ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಭ್ರಮರಂಭಾ ಮಂಜುನಾಥ ಅವರ ಜಯಲಕ್ಷ್ಮೀ ಲೇಔಟ್ ನ ಶ್ರೀಗುರು ತಿಪ್ಪೇರುದ್ರಸ್ವಾಮಿ ನಿವಾಸದಲ್ಲಿ “ನವರಾತ್ರಿ”ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ
ಶ್ರೀದೇವಿಸ್ತುತಿ ಪಾರಾಯಣ ಮತ್ತು ದೇವಿ ಭಜನೆಗಳು ಹಾಗೂ ಶ್ರೀಮತಿ ಭ್ರಮರಂಭಾ ಮಂಜುನಾಥ,ಎಂ ಗೀತಾ ನಾಗರಾಜ್,ಉಷಾ ಶ್ರೀನಿವಾಸ್ ಅವರಿಂದ ಬಸವಣ್ಣನವರ ಕುರಿತ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.
ಈ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಗೀತಾ ಶ್ರೀನಿವಾಸ್,ಭಾರತಿ, ಆಶಾ,ಇಂದ್ರಮ್ಮ, ಜಿ ಯಶೋಧಾ ಪ್ರಕಾಶ್, ವಿಜಯಲಕ್ಷ್ಮೀ, ಕವಿತಾ ಗುರುಮೂರ್ತಿ, ಕೆ.ಎಸ್.ವೀಣಾ, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ವೀರಮ್ಮ ಬಸವರಾಜ, ಯತೀಶ್ ಎಂ ಸಿದ್ದಾಪುರ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.

