ಬಿಜೆಪಿ ಬೂತ್ ಮಟ್ಟದಿಂದ ಮುಂಬರುವ ಜಿ. ಪಂ.ತಾ.ಪಂ ಗ್ರಾ.ಪಂ ಪಕ್ಷ ಸಂಘಟನೆ ಚಾಲನೆ ಮಂಡಲ ಅಧ್ಯಕ್ಷ ಮಲ್ಲೇಶ್.
ನಾಯಕನಹಟ್ಟಿ-: ಮುಂಬರುವ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದು ಸತ್ಯ ಎಂದು ಬಿಜೆಪಿ ನಾಯಕನಹಟ್ಟಿ ಮಂಡಲ ಅಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶ್ ತಿಳಿಸಿದರು.
ಸೋಮವಾರ ಹೋಬಳಿಯ ಗೌಡಗೆರೆ ಅಬ್ಬೇನಹಳ್ಳಿ ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ಗ್ರಾಮಗಳಲ್ಲಿ ನಾಯಕನಹಟ್ಟಿ- ಮಂಡಲ ವತಿಯಿಂದ ಸಂಘಟನಾ ಪರ್ವ ಮತ್ತು ವಿಬಿ-ಜಿ ರಾಮ್ ಜಿ ಜಾಗೃತಿ ಕಾರ್ಯಕ್ರಮ ಹಾಗೂ ಬೂತ್ ಮಟ್ಟದ ಪಕ್ಷ ಸಂಘಟನೆಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಭ್ರಷ್ಟಾಚಾರ ತಂಡವಾಡುತ್ತಿದೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ ಹೊರತು ಜನರ ಕಷ್ಟಗಳಿಗೆ ಸ್ಪಂದಿಸಿದ ಸರ್ಕಾರ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಇತ್ತೀಚಿಗೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಯಾದ ವಿಬಿ- ಜಿ ರಾಮ್ ಜಿ ಯೋಜನೆ ಬಗ್ಗೆ ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡುತ್ತಿದೆ ಇದರ ಬಗ್ಗೆ ಯಾರು ಸಹ ಕಿವಿಗೊಡಬೇಡಿ ಎಂದರು.
ಇನ್ನೂ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಪಾಪೇಶ್ ನಾಯಕ
ನಿಕಟ ಪೂರ್ವ ಅಧ್ಯಕ್ಷರಾದ ಎಂ.ವೈ.ಟಿ. ಸ್ವಾಮಿ.ಮತ್ತು
ಈ. ರಾಮರೆಡ್ಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ ಟಿ ಮೋರ್ಚ ಜಿಲ್ಲಾ ಅಧ್ಯಕ್ಷ ಪಿ.ಶಿವಣ್ಣ, ಮಂಡಲ ಕಾರ್ಯದರ್ಶಿ ಎಚ್ ವಿ. ಪ್ರಕಾಶ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಎಸ್ ತಿಪ್ಪೇಸ್ವಾಮಿ, ಪಟ್ಟಣ ಪಂಚಾಯತ್ ಸದಸ್ಯ ಹಾಗೂ ಕೋಶ ಅಧ್ಯಕ್ಷ ಎನ್. ಮಹಾಂತಣ್ಣ, ಎಸ್ ಸಿ. ಮೋರ್ಚಾ ಅಧ್ಯಕ್ಷ ಬಿ. ಶಂಕರ ಸ್ವಾಮಿ, ಮಂಡಲ ಎಸ್ ಟಿ ಮೋರ್ಚಾ ಅಧ್ಯಕ್ಷ ಎಸ್. ನಾಗರಾಜ್, ಒಬಿಸಿ ಅಧ್ಯಕ್ಷ ರಂಗನಾಥ್, ನಗರ ಘಟಕ ಅಧ್ಯಕ್ಷ ಜಾಗನೂರಹಟ್ಟಿ ನಾಗರಾಜ್, ನಿಕಟಪೂರ್ವ ರೈತ ಮೋರ್ಚಾ ಅಧ್ಯಕ್ಷ ಬಾಲರಾಜ್ ಯಾದವ್,
ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯರಾದ ಜಿ.ಓ. ಓಬಳೇಶ್, ಎಸ್. ವೆಂಕಟೇಶ್ ದಳಪತಿ , ತಿಪ್ಪೇಶ್ ಗಿಣಿಯರ್ ಎಂ ಎಚ್ ಲಕ್ಷಣ್, ಕೆಂಗ್ ರುದ್ರಪ್ಪ, ಕಾರ್ಯಕರ್ತರಾದ ಉಮೇಶ್, ಗುಂಡಣ್ಣ, ಗಿಡ್ಡಾಪುರ ಬೋರಯ್ಯ, ಇದ್ದರು.

