ಚಳ್ಳಕೆರೆ : ಅರಸು ಮೇಲಲ್ಲ, ಅಗಸ ಕೀಳಲ್ಲ ಎಂಬ ನಿಲುವು ಹೊಂದಿದ ಮಹಾನ್ ವ್ಯಕ್ತಿ ಮಡಿವಾಳ ಮಾಚಿದೇವ ಎಂದು ಸ್ಥಳೀಯ ಶಾಸಕ ಟಿ. ರಘುಮೂರ್ತಿ ಹೇಳಿದ್ದಾರೆ.
ಅವರು ತಾಲೂಕು ಕಛೇರಿಯಲ್ಲಿ ರಾಷ್ಟೀಯ ಹಬ್ಬಗಳ ವತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಮಾತನಾಡಿದರು. ಶೈಕ್ಷಣಿಕ ಪ್ರಗತಿ ಇಲ್ಲದೆ ಮಡಿವಾಳ ಸಮಾಜವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ, ಆದ್ದರಿಂದ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು, ತಾಲ್ಲೂಕಿನಲ್ಲಿ ತೀರಾ ಹಿಂದುಳಿದ ಮಡಿವಾಳ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಚಳ್ಳಕೆರೆ ನಗರದಲ್ಲಿ ನಿವೇಶನವನ್ನು ಒದಗಿಸಿಕೊಡುವುದಾಗಿ ಮತ್ತು ಸಮುದಾಯಕ್ಕಾಗಿ ಶ್ರಮಿಸಿದ ಮಹಾನೀಯರನ್ನು ಸದಾ ಸ್ಮರಿಸುವುದರ ಮೂಲಕ ರಚನಾತ್ಮಕವಾದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಡಿವಾಳ ಸಮಾಜದ ಮುಖಂಡರಿಗೆ ಕಿವಿ ಮಾತು ಹೇಳಿದರು.
ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ್ ಮಾತನಾಡಿ, ಮನುಷ್ಯ ದೇಹದಿಂದ ತ್ಯಜಿಸಿದ ಮೇಲೆಯೂ ಅವರನ್ನು ನೆನೆಯುವ ಕಾರ್ಯ ಅವರ ಮಾಡಿದ ಸೇವೆ ಸಾಧನೆಯಿಂದ ಮಾತ್ರ ಸಾದ್ಯವೆಂದು ಅಂತಹ ಮಹಾನ್ ವ್ಯಕ್ತಿ ಮಾಚಿದೇವರೊಬ್ಬರು, ಎಂದು ಹೇಳಿದ್ದಾರೆ.
ಮಡಿವಾಳ ಸಂಘದ ಅಧ್ಯಕ್ಷ ನಾಗರಾಜ್ ಮಾತನಾಡಿ, ಸಂಪ್ರದಾಯಿಕ ಶಿಕ್ಷಣವನ್ನು ಪಡೆದ ಉದ್ಯೋಗದಾತರೇ ಇಂದಿನ ದಿನಗಳಲ್ಲಿ ತಮ್ಮ ತಂದೆ-ತಾಯಿಯರನ್ನು ವೃದ್ದಾಶ್ರಮಕ್ಕೆ ತಳ್ಳಿ ಪಾಲನೆ, ಪೋಷಣೆಯ ಜವಬ್ಧಾರಿಯಿಂದ ನುಸುಳಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ, ಸರ್ವ ಸಮಾಜವನ್ನು ಸಮಾನತೆಯಿಂದ ಕಾಣಬೇಕು. ಮತ್ತು ಹನ್ನೆರಡನೆ ಶತಮಾನದ ಶರಣರ ತತ್ವ-ಸಿದ್ಧಾಂತವನ್ನು ಪಾಲನೆ ಮಾಡುವುದರ ಜತೆಗೆ ತಮ್ಮ ಮಕ್ಕಳಿಗೆ ಮೌಲ್ಯಯುತವಾದ ನೈತಿಕ ಶಿಕ್ಷಣವನ್ನು ಕೊಡಿಸಬೇಕು ಎಂದು ಸಲಹೆ ನೀಡಿದರು.
ಈದೇ ಸಂಧರ್ಭದಲ್ಲಿ ಮಡಿವಾಳ ಸಮುದಾಯಕ್ಕೆ ಮೂರು ಎಕರೆ ಭೂಮಿಯನ್ನು ಮಂಜೂರು ಮಾಡಬೇಕೆಂದು ಮನವಿ ಸಲ್ಲಿಸಿದರು, ಮನವಿ ಸ್ವೀಕರಿಸಿದ ತಹಶೀಲ್ದಾರ್ ರೇಹಾನ್ ಪಾಷ, ಶಾಸಕ ಟಿ. ರಘುಮೂರ್ತಿ, ಈಗಾಗಲೇ ತಾಲೂಕಿನ ಪ್ರತಿಯೊಂದು ಸಮಾಜಕ್ಕೆ ಸ್ಮಾಶನ ಭೂಮಿಗೆ ಇನ್ನಿತರೆ ಕಾರ್ಯಗಳಿಗೆ ಭೂಮಿನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ, ಎಂದರು.
ಇದೇ ಸಂಧರ್ಭದಲ್ಲಿ ಗ್ಯಾರಂಟಿ ಯೋಜನೆ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ, ತಹಶಿಲ್ದಾರ್ ರೇಹಾನ್ ಪಾಷ,
ಬಿಇಓ.ಸುರೇಶ್, ಪೌರಾಯುಕ್ತ ಜಗರೆಡ್ಡಿ,
ಕೃಷಿ ಸಹಾಯಕ ನಿರ್ದೇಶಕ ರಮೇಶ್, ಆರೋಗ್ಯ ಸಹಾಯಕ ತಿಪ್ಪೇಸ್ವಾಮಿ, ಪಶು ಅಧಿಕಾರಿ ಶ್ರೀನಿವಾಸ್, ಪಿಡಿಓ ವೇದಾಮೂರ್ತಿ, ಕೃಷಿ ಅಧಿಕಾರಿ ಜೀವನ್, , ಗ್ರಾಮ ಲೆಕ್ಕಿಗ ಪ್ರಕಾಶ್,, ಮುಖಂಡರಾದ ಮಂಜುನಾಥ್, ನಾಗರಾಜ್, ಆರ್ಟ್ಸ್ ಸನ್ ಪ್ರಕಾಶ್, ರಂಗಸ್ವಾಮಿ, ಮಾರುತಿ, ವೀರಣ್ಣ, ಕುಶಾಲಪ್ಪ, ನಾಗರಾಜ್, ಇತರರು ಇದ್ದರು.


