ಎನ್ ಮಹದೇವಪುರ : ಮಹಿಳಾ ರೇಷ್ಮೆ ಬೆಳೆಗಾರರಿಗೆ ಫಾರ್ಮಸಿ ಸಿಲ್ಕ್ ತರಬೇತಿ ನೀಡಿದ ವಿಜ್ಞಾನಿ ಡಾ. ಶ್ರೀನಿವಾಸಲು.
ನಾಯಕನಹಟ್ಟಿ::ಜ.24. ಪ್ರತಿಯೊಬ್ಬರೂ ರೇಷ್ಮೆಯಲ್ಲಿ ಉತ್ತಮ ಆದಾಯವನ್ನು ಗಳಿಸಲು ಮುಂದಾಗಬೇಕು ಎಂದು ಚಿತ್ರದುರ್ಗ ರೇಷ್ಮೆ ವಿಜ್ಞಾನಿ ವೈ. ಶ್ರೀನಿವಾಸಲು ಹೇಳಿದರು.
ಶುಕ್ರವಾರ ಹೋಬಳಿಯ ಎನ್ ಮಹದೇವಪುರ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗ್ರಾಮದಲ್ಲಿ ಸಂಶೋಧನಾ ವಿಸ್ಥರಣಾ ಕೇಂದ್ರ (ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರ ಕೊಡತಿ ಬೆಂಗಳೂರು ಇದರ ಅಂಗ ಸಂಸ್ಥೆ) ಕೇಂದ್ರ ರೇಷ್ಮೆ ಮಂಡಳಿ ಭಾರತ ಸರ್ಕಾರ ಚಿತ್ರದುರ್ಗ ವತಿಯಿಂದ ಫಾರ್ಮಸಿ ಸಿಲ್ಕ್ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದರು ರೇಷ್ಮೆ ಮಹಿಳಾ ಬೆಳೆಗಾರರಿಗೆ ಮೂರು ದಿನ ಫಾರ್ಮಸಿ ಸಿಲ್ಕ್ ತರಬೇತಿ ಆಯೋಜಿಸಲಾಗಿದೆ ಪ್ರತಿಯೊಬ್ಬರೂ ಫಾರ್ಮಸಿ ಸಿಲ್ಕ್ ಎಲ್ಲರೂ ರೇಷ್ಮೆ ಬೆಳೆ ಬೆಳೆಯಲು ಯಾವ ರೀತಿ ಬೆಳೆಯಲು ನೈಪುಣ್ಯತೆ ರೇಷ್ಮೆ ಮನೆ ತೊಳಿಯುವುದು ಸೇರಿದಂತೆ ಅತಿ ಹೆಚ್ಚು ಲಾಭ ಪಡೆಯುವ ಉದ್ದೇಶದಿಂದ ಕೇಂದ್ರ ರೇಷ್ಮೆ ವತಿಯಿಂದ ಜಾರಿಗೊಳಿಸಲಾಗಿದೆ ಇವತ್ತು ಎನ್. ಮಹದೇವಪುರ ಗ್ರಾಮದಲ್ಲಿ ಪ್ರತ್ಯೇಕವಾಗಿ ಮಹಿಳೆಯರು ರೇಷ್ಮೆ ಬೆಳೆಗಾರರು ಇದ್ದಾರೆ ಅವರು ಹೆಚ್ಚು ಹೊತ್ತು ಕೊಟ್ಟು ರೇಷ್ಮೆ ಮನೆಯಲ್ಲಿ ಯಾವ ಯಾವ ಜಾಗೃತಿ ತೆಗೆದುಕೊಳ್ಳಬೇಕು ತೋಟ ನಿರ್ವಹಣೆ ಹೇಗೆ ಮಾಡಬೇಕು ಅದೇ ರೀತಿ ಮಹಿಳೆಯರಿಗೆ ಎರಡು ದಿನ ತರಬೇತಿ ಇನ್ನೂ ಮೂರನೇ ದಿನ ಹತ್ತಿರದ ರೇಷ್ಮೆ ಪ್ರಗತಿಪರ ರೈತರ ಬಳಿ ಕರೆದುಕೊಂಡು ಹೋಗಿ ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ರೇಷ್ಮೆಯಲ್ಲಿ ಯಾವ ರೀತಿ ಬೆಳೆಯುತ್ತಾರೆ ಯಾವ ಯಾವ ಆದಾಯ ಪಡೆಯುತ್ತಾರೆ ಎಂಬುದನ್ನು ತರಬೇತಿ ನೀಡಲಾಗುತ್ತದೆ ಎಂದರು
ಇದೇ ಸಂದರ್ಭದಲ್ಲಿ ಚಿತ್ರದುರ್ಗ ರೇಷ್ಮೆ ಹಿರಿಯ ತಾಂತ್ರಿಕ ಸಹಾಯಕ ಜಿ. ಪಾಪಯ್ಯ, ಚಳ್ಳಕೆರೆ ರೇಷ್ಮೆ ಇಲಾಖೆ ನಿರೀಕ್ಷಕ ಡಿ ಟಿ ಬೋರಯ್ಯ, ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ ನಾಗರಾಜ್, ಬಾಬು ಸ್ವಾಮಿ ಸೇರಿದಂತೆ ರೇಷ್ಮೆ ಮಹಿಳಾ ಬೆಳೆಗಾರರು ಉಪಸ್ಥಿತರಿದ್ದರು

