ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಜನರು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಿ ಅಬ್ಬೇನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಪಾಪಮ್ಮ ಆನಂದಪ್ಪ,
ನಾಯಕನಹಟ್ಟಿ: ಗ್ರಾಮೀಣ ಪ್ರದೇಶದ ಬಡ ಜನರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ವರದಾನವಾಗಿದೆ ಎಂದು.ಅಬ್ಬೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ಪಾಪಮ್ಮ ಆನಂದಪ್ಪ ಹೇಳಿದರು.
ಸೋಮವಾರ ಹೋಬಳಿಯ ಇಲ್ಲಿನ ಅಬ್ಬೇನಹಳ್ಳಿ ಗ್ರಾಮದ ಬಯಲು ರಂಗ ಮಂದಿರದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು
ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ 2024 -25ನೇ ಸಾಲಿನ 14ನೇ ಮತ್ತು 15ನೇ ಹಣಕಾಸು ಆಯೋಗ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಇತರೆ ಅನುಷ್ಠಾನ ಇಲಾಖೆ ಮತ್ತು 15ನೇ ಹಣಕಾಸಿನ ಆಯೋಗದ ಅಡಿಯಲ್ಲಿ ಪಾವತಿ ಆಗಿರುವ ಕಾಮಗಾರಿ ಖರ್ಚು ವೆಚ್ಚದ ಬಗ್ಗೆ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಬಡ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ದುಡಿಯುವ ಕೈಗಳಿಗೆ ಕೆಲಸ ಕೊಡುವ ಸಲುವಾಗಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ನೀಡಿದೆ ಆದ್ದರಿಂದ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಯ ಜನರು ಉದ್ಯೋಗ ಖಾತ್ರಿ ಯೋಜನೆ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉತ್ತಮ ಅಭಿವೃದ್ಧಿ ಕಾಮಗಾರಿಗಳು ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವಂತಹ ಕೆಲಸವನ್ನು ಸಾಮಾಜಿಕ ಪರಿಶೋಧನೆ ತಂಡದ ಕಾರ್ಯ ಶ್ಲಾಘನೀಯ.
ಸಾಮಾಜಿಕ ಪರಿಶೋಧನೆ ತಂಡದಿಂದ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮಹತ್ವದ ಬಗ್ಗೆ ಮನೆ ಮನೆಗಳಿಗೆ ತಲುಪಿಸುವ ಕಾರ್ಯ ಮಾಡಿದ್ದು ಅತ್ಯಂತ ಶ್ಲಾಘನೀಯವಾಗಿದೆ ಎಂದರು.
OA
ಇದೇ ವೇಳೆ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ಸಾಮಾಜಿಕ ಪರಿಶೋಧನೆ ಅಧಿಕಾರಿ ಟಿ. ಮಲ್ಲಪ್ಪ ಮಾತನಾಡಿದರು. ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಗ್ರಾಮ ಸಭೆಯಲ್ಲಿ 2024-25ನೇ ಸಾಲಿನ 14ನೇ ಮತ್ತು 15ನೇ ಹಣಕಾಸಿನ
ಅನುದಾನ ಹಾಗೂ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅನುಷ್ಠಾನಗೊಂಡಿರುವ ಕಾಮಗಾರಿಗಳ ಬಗ್ಗೆ ಗ್ರಾಮ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರ ಕುಂದು ಕೊರತೆಗಳ ಪಡೆದುಕೊಂಡು ಸ್ಥಳದಲ್ಲಿ ಪರಿಶೀಲನೆ ಮಾಡಿರುವುದಾಗಿ ತಿಳಿಸಿದರು.
ಇನ್ನೂ ಸಾಮಾಜಿಕ ಪರಿಶೋಧನೆಯ ಲೆಕ್ಕಪರಿಶೋಧನೆಯ ಅಧ್ಯಕ್ಷತೆಯನ್ನು ಗ್ರಾಮದ ಪಾಪಣ್ಣ ವಹಿಸಿದ್ದರು
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶ್ರೀಮತಿ ಅನಿತಮ್ಮ ಜಿ.ಎಂ. ಜಯಣ್ಣ, ಸದಸ್ಯರಾದ ಪಿ.ವಿ ಸಣ್ಣೋಬಯ್ಯ, ಪಡ್ಲ ಬೋರಯ್ಯ, ಗುಂತಕೋಲಮ್ಮನಹಳ್ಳಿ ಗುಂಡಪ್ಪ, ಸುಮಿತ್ರಮ್ಮ, ಕೆ.ಜಿ. ತಿಪ್ಪೇಸ್ವಾಮಿ, ಬೋರಮ್ಮ, ಕವಿತಾ, ಶೇಖರ್ ಗೌಡ, ಗ್ರಾಮಸ್ಥರಾದ ಎಂ.ಎಸ್ .ಜಯಪ್ರಕಾಶ್, ಎ.ಪಿ. ರೇವಣ್ಣ, ಕೊರಡಿಹಳ್ಳಿ ಸುರೇಂದ್ರಪ್ಪ, ಕುಬೇರಪ್ಪ, ಪಿಡಿಒ ಮೋಹನ್ ದಾಸ್, ಇಂಜಿನಿಯರ್ ಮಹೇಶ್ ನಾಯ್ಕ, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಕಾರ್ಯದರ್ಶಿ ಗುರುಸ್ವಾಮಿ ,ಗಣಕಯಂತ್ರ ನಿರ್ವಾಹಕ ಎಂ.ಪಿ. ಈಶ್ವರಪ್ಪ, ಬಿಲ್ ಕಲೆಕ್ಟರ್ ಎ. ಚಂದ್ರಶೇಖರ್,ಗುಂತಕೋಲಮ್ಮನಹಳ್ಳಿ ಎಸ್ ಶಿವತಿಪ್ಪೇಸ್ವಾಮಿ, ಕಾಯಕ ಮಿತ್ರ ವೀಣಾ, ಸೇರಿದಂತೆ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಗ್ರಾಮಸ್ಥರು ಉಪಸ್ಥಿತರಿದ್ದರು,

