ಪ್ರತಿಯೊಬ್ಬರೂ ಕನ್ನಡ ಭಾಷೆ ನೆಲ ಜಲ ಋಣ ತೀರಿಸಬೇಕು ಪಟ್ಟಣ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಟಿ. ಮಂಜುಳಾ ಶ್ರೀಕಾಂತ್ ಸಲಹೆ.

ನಾಯಕನಹಟ್ಟಿ:: ಕನ್ನಡ ಪರಂಪರೆಯ ಉಳಿವಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಕನ್ನಡ ಭಾಷೆ ನೆಲ ಜಲದ ಋಣ ತೀರಿಸಬೇಕು ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಟಿ. ಮಂಜುಳ ಶ್ರೀಕಾಂತ್ ಹೇಳಿದರು.

ಶನಿವಾರ ಪಟ್ಟಣದ ಪಟ್ಟಣ ಪಂಚಾಯತಿ ಆವರಣದಲ್ಲಿ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ತಾಯಿ ಭುವನೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕನ್ನಡ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಕನ್ನಡಿಗರಿಗೊಂದು ನಾಡು ಕಟ್ಟಲು ಅದೆಷ್ಟೋ ಮಂದಿ ಹೋರಾಟ ಮಾಡಿದ್ದಾರೆ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಹಾಲಿ ಪಟ್ಟಣ ಪಂಚಾಯತಿ ಸದಸ್ಯ ಸೈಯದ್ ಅನ್ವರ್ ಮಾತನಾಡಿದರು ಕರ್ನಾಟಕದ ಮನೆ ಮನೆಗಳಲ್ಲಿ ಕನ್ನಡ ಭಾಷೆ ಹಾಸುಹೊಕ್ಕಾಗಿ ನೆಲ್ಲಿಸಬೇಕು ಇತರೆ ರಾಜ್ಯದ ಜನರಿಗೆ ಕನ್ನಡವನ್ನು ಕಲಿಸಿ ನಾಡಿನ ಸಂಸ್ಕೃತಿ ಆಚಾರ ವಿಚಾರಗಳನ್ನು ಪರಿಚಯಿಸುವ ಕೆಲಸ ಕನ್ನಡಿಗರಾದ ನಾವು ರೂಡಿಸಿಕೊಳ್ಳಬೇಕು ಎಂದರು.

ಪಟ್ಟಣ ಪಂಚಾಯತಿ ಸದಸ್ಯೆ ಹಾಗೂ ಮಾಜಿ ಉಪಾಧ್ಯಕ್ಷೆ ಸರ್ವ ಮಂಗಳ ಉಮಾಪತಿ ಮಾತನಾಡಿದರು ಇಡೀ ಕರ್ನಾಟಕ ರಾಜ್ಯದಾದ್ಯಂತ ನಾಡಹಬ್ಬ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ಒಂದರಂದು ಆಚರಣೆ ಮಾಡುತ್ತೇವೆ 1956ರಲ್ಲಿ ನವಂಬರ್ ಒಂದರಂದು ಕರ್ನಾಟಕ ಎಂದು ನಾಮಕರಣವಾಯಿತು. ಇಡೀ ಪ್ರಪಂಚಕ್ಕೆ ಹೆಸರುವಾಸಿಯಾದ ನಮ್ಮ ಕರ್ನಾಟಕ ರಾಜ್ಯ ಕಲೆ ಸಾಹಿತ್ಯ ಸಂಗೀತಕ್ಕೆ ಹೆಸರುವಾಸಿಯಾಗಿದೆ ಅನೇಕ ಮಹಾನಿರಾದ ರನ್ನ ಪಂಪ ಇಂತಹ ಮೊದಲಾದ ಕವಿಗಳು ಹುಟ್ಟಿದ ನಾಡು ಅದರಂತೆ ಅಂತೆಯ ಅಕ್ಕ ಬುಕ್ಕರು ವಿಜಯನಗರ ಅರಸರು ಸೇರಿದಂತೆ ನಾವು ಸಹ ಈ ನಾಡಿನಲ್ಲಿ ಹುಟ್ಟಿರುವುದು ನಮ್ಮ ಪುಣ್ಯ ಎಂದರು.

ಉಪಾಧ್ಯಕ್ಷೆ ಬೊಸಮ್ಮ ಮಂಜುನಾಥ್ ಮಾತನಾಡಿ ನವಂಬರ್ 1 ಕನ್ನಡ ರಾಜ್ಯೋತ್ಸವ ಈ ದಿನಕ್ಕೆ ಮಾತ್ರ ಸೀಮಿತವಾಗದೆ ಪ್ರತಿದಿನವೂ ಪ್ರತಿ ಕ್ಷಣವು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎನ್ನುವ ಹಾಗೆ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಪಿ.ಓಬಯ್ಯ ದಾಸ್, ಪಾಲಮ್ಮ, ವಿನುತಾ, ಸುನಿತಾ ಮುದಿಯಪ್ಪ, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಓ. ಶ್ರೀನಿವಾಸ್, ಶಿಕ್ಷಕ ಸದಾಶಿವಯ್ಯ, ಸಿಬ್ಬಂದಿಗಳಾದ ದ್ವಿತೀಯ ದರ್ಜೆ ಸಹಾಯಕ ಟಿ. ತಿಪ್ಪೇಸ್ವಾಮಿ, ಹೆಲ್ತ್ ಇನ್ಸ್ಪೆಕ್ಟರ್ ತಿಪ್ಪೇಶ್, ಸೇರಿದಂತೆ ಪೌರಕಾರ್ಮಿಕರು ಇದ್ದರು.

About The Author

Namma Challakere Local News
error: Content is protected !!