ಕನ್ನಡದ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಿ ನಿವೃತ್ತ ತಹಸಿಲ್ದಾರ್ ಎನ್ ರಘುಮೂರ್ತಿ.
ನಾಯಕನಹಟ್ಟಿ:: ಕನ್ನಡವನ್ನು ಉಳಿಸಿ ಬೆಳೆಸಿದ ನಾಡಿನ ಮಹನೀರನ್ನು ಸ್ಮರಿಸಬೇಕು ಎಂದು ನಿವೃತ್ತ ತಾಸಿಲ್ದಾರ್ ಎನ್. ರಘುಮೂರ್ತಿ ಹೇಳಿದರು.
ಶನಿವಾರ ಪಟ್ಟಣದ ಶ್ರೀ ತಿಪ್ಪೇರುದ್ರಸ್ವಾಮಿ ವಿದ್ಯ ಸಮಸ್ಯೆಯಲ್ಲಿ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು ಕನ್ನಡ ನಾಡಿನ ರಾಷ್ಟ್ರಕೂಟರು ಹೊಯ್ಸಳರು ಚಾಲುಕ್ಯರು ಕದಂಬರು ಪಂಪ ರನ್ನ ಜನ್ಮ ಕುವೆಂಪು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸೇರಿದಂತೆ ಅನೇಕ ಮಹನೀಯರು ಕನ್ನಡ ನಾಡಿನ ಕನ್ನಡ ಉಳಿವಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಅಂಥವರನ್ನು ನಾವು ಸ್ಮರಿಸುವ ಕೆಲಸವಾಗಬೇಕು ಕನ್ನಡದ ಇತಿಹಾಸ ಪರಂಪರೆ ವೈಭವನ ಕನ್ನಡ ನಾಡಿಗೆ ಉಳಿಸೋಕೆ ಅತ್ಯಮೂಲ್ಯ ಕೊಡುಗೆ ಕೊಟ್ಟವರು ಪಂಪ.
ಶ್ರೀ ತಿಪ್ಪೇರುದ್ರಸ್ವಾಮಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂ ವೈ ಟಿ ಸ್ವಾಮಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ರಾಜೇಂದ್ರ, ಶಶಿಧರ್, ತಿಪ್ಪೇಸ್ವಾಮಿ, ಉಪ ಪ್ರಾಂಶುಪಾಲರಾದ ಬಿ ಆರ್ ರಮೇಶ್, ಶಿಕ್ಷಕರಾದ ಎಂ. ಫಣೇಂದ್ರ ಕುಮಾರ್,ಬಿ. ಉಮೇಶ್, ಡಿ ಈರಣ್ಣ, ಎಸ್ ಆರ್ ವೀರೇಶ್, ಆರ್ ಬಸವರಾಜ್, ಬಿ.ಕೆ. ಮಾರುತಿ,ಕೆ. ಶಬೀರ್, ಡಿ, ತಿಮ್ಮರಾಜ್, ಸೇರಿದಂತೆ ಶಿಕ್ಷಕ -ಶಿಕ್ಷಕಿಯರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು.

