ಸಾರ್ವಜನಿಕ ಸ್ಮಶಾನ ಭೂಮಿ ರಕ್ಷಿಸುವಂತೆ ತಹಸಿಲ್ದಾರ್ ಗೆ ಮನವಿ
ಚಳ್ಳಕೆರೆ: ಇತ್ತೀಚಿನ ದಿನಗಳಲ್ಲಿ ಮನುಷ್ಯನ ಸ್ವಾರ್ಥ ಕ್ಕೆ ಸ್ಮಾಶನ ಜಾಗವನ್ನು ಬಿಡದೆ ಒತ್ತುವರಿ ಮಾಡುವುದು ತಾಲೂಕಿನಾದ್ಯಂತ ಕಂಡು ಬಂದಿದೆ,
ಅದರಂತೆ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೆಡ್ಡಿಹಳ್ಳಿ ಗ್ರಾಮದ ರಿ. ಸರ್ವೆ ನಂಬರ್ 136 ರಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಮೀಸಲಿಟ್ಟ 2 .ಎಕರೆ ಭೂಮಿಯನ್ನು ನಿವೇಶನಕ್ಕೆ ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಇನ್ನೂ ಸಮಾಧಿಗಳನ್ನು ಜೆಸಿಬಿ ಯಂತ್ರಗಳನ್ನ ಬಳಸಿ ತೆರವುಗೊಳಿಸಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಲು ಮುಂದಾಗಿರುವವರ ವಿರುದ್ಧ ಕಾನೂನು ಕ್ರಮ ಕೈ ಗೊಂಡು ಸ್ಮಶಾನ ಭೂಮಿ ರಕ್ಷಿಸಿ ಕೊಡುವಂತೆ ರೆಡ್ಡಿಹಳ್ಳಿ ಗ್ರಾಮದ ದಲಿತ ಮುಖಂಡರು ತಾಲೂಕು ಕಛೇರಿಗೆ ಮನವಿಸಲ್ಲಿಸಿದ್ದಾರೆ.

