“ಶ್ರೀನರಹರಿ ಸೇವಾ ಪ್ರತಿಷ್ಠಾನದಿಂದ ಡಾ.ಎಂ.ಆರ್.ಜಯರಾಮ್ ಗೆ ಸನ್ಮಾನ”. ಚಳ್ಳಕೆರೆ:-ನರಹರಿನಗರದ ಶ್ರೀನರಹರಿ ಸೇವಾ ಪ್ರತಿಷ್ಠಾನ ಮತ್ತು ನಾಗ ಸಿಂಹಾದ್ರಿ ಚಾರಿಟೀಸ್ ನ ವತಿಯಿಂದ ಶ್ರೀನರಹರೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2025ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರುಸ್ಕೃತರಾದ ಬೆಂಗಳೂರಿನ ಎಂ.ಎಸ್.ರಾಮಯ್ಯ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಜಯರಾಮ್ಅವರನ್ನು
ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸಮಾರಂಭದಲ್ಲಿ ಶ್ರೀನರಹರಿ ಸದ್ಗುರು ಆಶ್ರಮದ ಅಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು, ವೈ ನರಹರಿ, ವಿಶ್ವಬ್ಯಾಂಕ್ ನ ಶ್ರೀಧರ,ಬಿ.ಸಿ.ಸಂಜೀವಮೂರ್ತಿ,ಮಾಕಂ ಶ್ರೀನಿವಾಸಲು, ವೆಂಕಟೇಶಮೂರ್ತಿ, ಸತೀಶ್ ಕುಮಾರ್, ರಾಮಚಂದ್ರಪ್ಪ, ಮಲ್ಲಿಕಾರ್ಜುನಪ್ಪ, ಯತೀಶ್ ಎಂ ಸಿದ್ದಾಪುರ,ದೇವರಾಜರೆಡ್ಡಿ, ರೇವಣಸಿದ್ದಪ್ಪ,ಮಾರುತಿ, ರಾಜೇಶ್ವರಿ ರಾಜಾರಾಮ್, ಪದ್ಮಶ್ರೀ,ಬಾಬು ಸೇರಿದಂತೆ ನರಹರಿ ಸದ್ಗುರು ಆಶ್ರಮದ ಸದ್ಭಕ್ತರು ಉಪಸ್ಥಿತರಿದ್ದರು.

