ಚಳ್ಳಕೆರೆ :

ಕ್ಯಾದಿಗುಂಟೆ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರ ವಿರುದ್ಧ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಿಸಾನ್ ಘಟಕ ವತಿಯಿಂದ ಪ್ರತಿಭಟನೆ

ಹೌದು ರೈತರನ್ನು ಕಡೆಗಣಿಸಿ, ಬ್ಯಾಕಿನ ವಹಿವಾಟು ಮಾಡುವ ವೇಳೆ ಸರಕಾರ ವಿವಿಧ ಯೋಜನೆಗಳ ಪರಿಹಾರದ ಮೊತ್ತವನ್ನು ಮುಟ್ಟುಗೊಲು ಹಾಕಿಕೊಂಡಿರುವುದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಪದಾಧಿಕಾರಿ
ಕಿಸಾನ್ ನಾಗರಾಜ್ ಪರಶುರಾಂಪುರ ಮಾತನಾಡಿ, ರೈತರ ಸಮಸ್ಯೆಗಳಾದ ಬೆಳೆ ವಿಮೆ, ಬೆಳೆ ಸಾಲ ರಿನಿವಲ್ ಈ ಕೆ ವೈ ಸಿ ಮಾಡಲು ಪ್ರತಿಯೊಂದು ಅರ್ಜಿ ಪಾರಂಗಳನ್ನು ಹೊರಗಡೆಯಿಂದ ತರಿಸುತ್ತಿರುವುದು ಖಂಡನೀಯ, ಪಿ ಎಂ ವಿಶ್ವಕರ್ಮ ಸಾಲ ಸೌಲಭ್ಯವನ್ನು ತರಬೇತಿ ಪಡೆದಂತಹ ಮಹಿಳೆಯರಿಗೆ ಕೊಡದಿರುವುದು ಗೃಹಲಕ್ಷ್ಮಿ ಹಣ ಮತ್ತು ವೃದ್ಯಾಪ್ಯ ವೇತನಗಳ ಪೆನ್ಷನ್ ಹಣವನ್ನು ಸಾಬೂಬು ಹೇಳಿ ಹಣ ಕೊಡದಿರುವುದು ಹಾಗೂ ಬ್ಯಾಂಕಿನ ಸುತ್ತಮುತ್ತಲಿನ ಹಳ್ಳಿಗಳ ರೈತರಿಗೆ ಸರಿಯಾದ ರೀತಿಯಲ್ಲಿ ಸೇವೆ ನೀಡದೆ ದುರ್ವತನೆ ತೋರುತ್ತಿದ್ದ ಇದನ್ನು ಮನಗಂಡ ರೈತ ಸಂಘ ಪ್ರತಿಭಟನೆ ನಡೆಸಿತ್ತು ಅದರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಬೇಟಿ ನೀಡಿ ವ್ಯವಸ್ಥಾಪಕರನ್ನು ತರಾಟೆ ತೆಗೆದುಕೊಂಡು ರೈತರಿಗೆ ಸರಿಯಾದ ರೀತಿಯಲ್ಲಿ ಬ್ಯಾಂಕ್ ನ ಸೇವೆಗಳನ್ನು ಸಿಗುವಂತೆ ಮಾಡಿದರು ಎಂದರು.

ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಸೋಮಗುದ್ದು ರಂಗಸ್ವಾಮಿಯವರು, ವೆಂಕಟರಮಣಪ್ಪ, ಮಹದೇವಪುರ ತ್ಯಾಗರಾಜ್ ಮಹದೇವಪುರ ರಾಜಕುಮಾರ ಮಹಾದೇವಪುರ ಮುತ್ತುರಾಜ್ ಗ್ರಾಮ ಪಂಚಾಯತ್ ಸದಸ್ಯ ಕ್ಯಾದಿಗುಂಟೆ ಶಶಿಕುಮಾರ್ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಕ್ಯಾದಿಗುಂಟೆ ರೈತ ಸಂಘದ ಪಂಚಾಯತ್ ಅಧ್ಯಕ್ಷರಾದ ತಿಮ್ಮರಾಜು ದಲಿತ ಮುಖಂಡನಾದ ರಾಮಾಂಜನಿ ಸಿದ್ದೇಶ್ವರನ ದುರ್ಗಾ ಟಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಜಲ್ದಿರಪ್ಪ ರೈತ ರಾಜಣ್ಣ ಕ್ಯಾದಿಗುಂಟೆ ತಾಲೂಕು ಉಪಾಧ್ಯಕ್ಷನಾದ ಕ್ಯಾದಿ ಗುಂಟೆ ರಮೇಶ್ ಇಲ್ಲ ಹಳ್ಳಿಯ ದಲಿತ ಮಹಿಳೆಯರು ಗೌರಿಪುರದ ದಲಿತ ಮುಖಂಡ ಬದ್ರಿನಾಥ್ ಹೀಗೆ ಸುಮಾರು ಹಳ್ಳಿಗಳ ಇನ್ನಿತರ ಮುಖಂಡರು ಹಾಜರಿದ್ದರು

About The Author

Namma Challakere Local News
error: Content is protected !!