ಚಳ್ಳಕೆರೆ :
ವಿಜ್ಞಾನ ನಗರಿ ಚಳ್ಳಕೆರೆಯ ಶ್ರೀ ವೀರಭದ್ರಸ್ವಾಮಿ ದೇವಸ್ಥಾನಲ್ಲಿ ಇಂದು ಚೋಟಾ ಮದ್ರಾಸ್, ಸಿನಿಮಾ ಚಿತ್ರಕರಣಕ್ಕೆ ನಗರಸಭೆ ಅಧ್ಯಕ್ಷೆ ಶಿಲ್ಪಾ ಕ್ಲಾಪ್ ಮಾಡುವ ಮೂಲಕ ಶುಭಾ ಕೋರಿದರು.
ಅದರಂತೆ ಚಿತ್ರತಂಡವನ್ನು ಕುರಿತು ಮಾತನಾಡಿದ ಅಧ್ಯಕ್ಷೆ ಶಿಲ್ಪಾ, ನಮ್ಮ ವಿಜ್ಞಾನ ನಗರಿಯಲ್ಲಿ ಸಿನಿಮಾ ಚಿತ್ರೀಕರಣ ಮಾಡುವುದು ಸಂತಸ ತಂದಿದೆ, ಇದರಿಂದ ನಮ್ಮನಾಡು, ಜಲ ಹಾಗೂ ನಮ್ಮ ಭಾಷೆಯ ಬೆಸುಗೆ ಚಿತ್ರೀಕರಣ ಕಟ್ಟಿಕೊಡಲಿದೆ, ಚಳ್ಳಕೆರೆ ನಗರದ ಆರಾಧ್ಯದೈವ ಶ್ರೀ ವೀರಭದ್ರಸ್ವಾಮಿ ಸನ್ನಿಧಿಯಲ್ಲಿ ಚಿತ್ರೀಕರಣ ಚಾಲನೆ ನೀಡಿರುವುದು ಸಂತಸ ತಂದಿದೆ ಎಂದರು.
ಇದೇ ಸಂಧರ್ಭದಲ್ಲಿ ಸಿನಿಮಾದ ನಿರ್ದೇಶಕ ರಾಮು ರಾಘವ್ ಮಾತನಾಡಿ, ಕೋಟೆ ನಾಡು ಚಿತ್ರದುರ್ಗ ದ ಸುತ್ತಾ ಮುತ್ತ ಚಿತ್ರೀಕರಣ ನಡೆಯಲಿದೆ. ಚೋಟಾ ಮದ್ರಾಸ್ ಸಿನಿಮಾ ಟೈಟಲ್ ಬಿಡುಗಡೆ ಗೊಂಡು ಈಗ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಮಾಜಿ ನಗರಸಭೆ ಅಧ್ಯಕ್ಷ , ದಲಿತ ಸಂಘರ್ಷ ಸಮಿತಿ ಸಂಚಾಲಕ ಟಿ.ವಿಜಯ್ ಕುಮಾರ್, ಹೊನ್ನುರಸ್ವಾಮಿ, ಮುರುಳಿಧರ್, ಸಿನಿಮಾ ನಿರ್ದೇಶಕ
ರಾಮು ರಾಘವ್, ಕೃಷ್ಣ ,ಮನೋಹರ್, ಬಾಲಾಜಿ, ಪೆನ್ನೆಶ್, ಇತರರು ಪಾಲ್ಗೊಂಡಿದ್ದರು.

