ಚಳ್ಳಕೆರೆ : ರೈತರು ಹೈನುಗಾರಿಕೆಯಿಂದ ಆರ್ಥಿಕವಾಗಿ ಸಬಲರಾಗುವುದು ಬಯಲು ಸೀಮೆಯಲ್ಲಿ ಒಂದು ಸವಾಲೆ ಸರಿ ಇದರ ಮಧ್ಯೆ ಹೈನುಗಾರಿಕೆ ಮಾಡಿ ಖುಷಿಯಿಂದ ಇರುವ ರೈತರ ಯಶೋಗಾಥೆ ನಮ್ಮ ಕಣ್ಣ‌ಮುಂದೆ ಇದೆ ಎಂದು ಶಿಮುಲ್ ಹಾಲು ಉತ್ಪಾದಕರ ನಿರ್ದೇಶಕ ಬಿಸಿ.ಸಂಜೀವ್ ಮೂರ್ತಿ ಹೇಳಿದರು.

ಅವರು ತಾಲೂಕಿನ ಮೈಲನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ಸದಸ್ಯ ರೊಂದಿಗೆ ಆರ್ಥಿಕ ವರ್ಷದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು,

ಗ್ರಾಮೀಣ ಭಾಗದಲ್ಲಿ ಕೇವಲ ಕೃಷಿಯಿಂದ ಜೀವನ ಸಾಗಿಸಲು ಕಷ್ಟ ಸಾಧ್ಯ ಆದ್ದರಿಂದ ಉಪ ಕಸುಬಾಗಿ ಹೈನುಗಾರಿಕೆ ಮಾಡಿದರೆ ಕುಟುಂಬದ ಜೀವನ ಸಾಗಿಸಬಹುದು, ಮಹಿಳೆಯರು ಇದರ ಸದುಪಯೋಗ ಪಡೆದು ಸರಕಾರದಿಂದ ಕಾಲ ಕಾಲಕ್ಕೆ ಬರುವ ಸಬ್ಸಿಡಿ ಯೋಜನೆಗಳನ್ನು ಪಡೆದುಕೊಂದು ಸಬಲರಾಗಿ ಎಂದರು.

ಇದೇ ಸಂಧರ್ಭದಲ್ಲಿ ಹಾಲು ಉತ್ಪಾದಕರ ಸಂಘದ ಸದಸ್ಯರು, ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!