ಮೊಬೈಲ್ ಟಿವಿ ಹಾವಳಿಯಿಂದ ಗ್ರಾಮೀಣ ಪ್ರದೇಶದ ಕಲೆ ಕಣ್ಮರೆ : ನಲಗೇತನಹಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ.ಎನ್ ಮುತ್ತಯ್ಯ ವಿಷಾದನೀಯ

ನಾಯಕನಹಟ್ಟಿ:: ರಾಜ್ಯದಲ್ಲಿ ಕಲೆಯ ತವರೂರು ನಾಯಕನಹಟ್ಟಿ ಹೋಬಳಿ ಖ್ಯಾತಿ ಪಡೆದಿದೆ ಎಂದು ನಲಗೇತನಹಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ.ಎನ್. ಮುತ್ತಯ್ಯ ಹೇಳಿದ್ದಾರೆ.

ಮಂಗಳವಾರ ರಾತ್ರಿ ಹೋಬಳಿಯ ಇಲ್ಲಿನ ನಲಗೇತನಹಟ್ಟಿ ಗ್ರಾ.ಪಂ. ವ್ಯಾಪ್ತಿಯ ದೊರೆಗಳಹಟ್ಟಿ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಿ ಜಾತ್ರೆ ಪ್ರಯುಕ್ತ ಶ್ರೀ ಚೌಡೇಶ್ವರಿ ದೇವಿ ಕೃಪಾಪೋಷಿತ ನವ ತರುಣ ನಾಟಕ ಕಲಾ ಸಂಘ ವತಿಯಿಂದ “ಶ್ರೀ ನುಂಕೇಮಲೆ ಸಿದ್ದೇಶ್ವರ ಮಹಾತ್ಮೆ ಅರ್ಥಾತ್. ಹರಳಯ್ಯನ ಭಕ್ತಿ ಪ್ರಭಾವ ಎಂಬ ಯಕ್ಷಗಾನ ನಾಟಕವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು
ಈ ಮುಂಚೆ ಟಿವಿ, ಮೊಬೈಲ್ ಹಾವಳಿ ಇಲ್ಲದೆ ಜನರು ತಮ್ಮ ಪಾಲಿನ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ನೆಮ್ಮದಿಯ ಬೇಜಾರು ಆದಾಗ ಸಂಜೆ ಸಮಯದಲ್ಲಿ ಈ ರೀತಿಯ ಸುಗಮ, ಸಂಗೀತ, ಸಾಮಾಜಿಕ ನಾಟಕ, ಯಕ್ಷಗಾನ, ಕೋಲಾಟ, ಸೋಬಾನ ಪದಗಳು, ಆಲಿಸುವ ಮೂಲಕ ತಮ್ಮ ಬೇಜಾರು ಮರೆಯುತ್ತಿದ್ದರು. ಆದರೆ ಈಗ ಟಿ.ವಿ.ಯ ಹಾವಳಿಯಿಂದ ಈ ರೀತಿಯ ಹಬ್ಬ ಜಾತ್ರೆ ಸಂದರ್ಭದಲ್ಲಿ ಯಕ್ಷಗಾನ ನಾಟಕಗಳು ನಡೆಯುವುದು ಬಹಳ ವಿರಳವಾಗಿವೆ ಇದನ್ನೇ ನಂಬಿಕೊಂಡ ಕಲಾವಿದರ ಜೀವನ ಕಷ್ಟವಾಗಿದೆ ಆದ್ದರಿಂದ ಯುವ ಪೀಳಿಗೆ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರು ಮುಂದಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಬಯಲಾಟ ಅಕಾಡೆಮಿ ಸದಸ್ಯ ಬಿ.ಮಾರನಾಯಕ, ನಲಗೇತನಹಟ್ಟಿ ಗ್ರಾಮ ಪಂಚಾಯತಿ ಸದಸ್ಯರಾದ ಕೆ.ಬಂಗಾರಪ್ಪ, ಕೆ.ಬಿ. ಬೋಸಯ್ಯ, ನಲಗೇತನಹಟ್ಟಿ ಬೋರಮ್ಮ ನಿಂಗರಾಜ್, ಶ್ರೀಮತಿ ದ್ರಾಕ್ಷಾಯಿಣಿ ಚಿದಾನಂದ, ಓ .ಪೂಜಾರಿ ಸಣ್ಣ ಓಬಯ್ಯ ಅರ್ಚಕರು, ಊರಿನ ಪ್ರಮುಖರಾದ ಯಜಮಾನ್ ಪೂಜಾರಿ ಓಬಯ್ಯ, ಜಿ.ಕೆ. ಓಬಯ್ಯ, ಡಿ.ಬಿ. ಬೋರಯ್ಯ, ಅಣಜಿ ತಿಪ್ಪೇಸ್ವಾಮಿ, ಪಿ.ಟಿ ರುದ್ರಮುನಿ, ಡಿ ಬಿ ಬೋರಯ್ಯ, ವೈ.ಒ. ಮಂಜುನಾಥ್ ಗೂಳಿ, ಶ್ರೀಧರ್ ನಾಯಕ, ಜಯಚಂದ್ರ, ಚಂದ್ರಣ್ಣ, ಬೋಸೆದೇವರಹಟ್ಟಿ ಕೆಇಬಿ ಇಲಾಖೆ ಶಿವಮೂರ್ತಿ, ನಿರಂಜನ್ ಮೂರ್ತಿ, ಸಮಸ್ತ ದೊರೆಗಳಹಟ್ಟಿ (ರಾಮದುರ್ಗ) ಗ್ರಾಮಸ್ಥರು ಇದ್ದರು

About The Author

Namma Challakere Local News
error: Content is protected !!