ಹೊಳಲ್ಕೆರೆ: ಕೋಟೆ ನಾಡಲ್ಲಿ ಪುಡಿ ರೌಡಿಗಳ
ಅಟ್ಟಹಾಸ
ಚಿತ್ರದುರ್ಗದ ಜೋಗಿಮಟ್ಟಿ ರಸ್ತೆ 5 ನೇ ಕ್ರಾಸ್ ನಲ್ಲಿ, ಹಳೆಯ
ದ್ವೇಷದ ಹಿನ್ನೆಲೆಯಲ್ಲಿ ಯಶವಂತ ಎಂಬ ಯುವಕನ ಮೇಲೆ
ಆರು ಜನರ ಗ್ಯಾಂಗ್ ಹಲ್ಲೆ ನಡೆಸಿದೆ. ಈ ಘಟನೆ ನಗರದ
ಗಾಂಧಿ ನಗರದಲ್ಲಿ ನಡೆದಿದ್ದು, ಗಾಯಾಳು ಯಶವಂತನನ್ನು
ಶಿವಮೊಗ್ಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ನಗರದ
ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಲ್ಲೆ ನಡೆಸಿದ
ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

