ಮೊಳಕಾಲ್ಕೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ
ಒತ್ತಾಯಿಸಿ ಪ್ರತಿಭಟನೆ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ರಾಜ್ಯ ರೈತ
ಸಂಘ ಹಾಗೂ ಹಸಿರು ಸೇನೆ ಬೆಸ್ಕಾಂ ಕಚೇರಿ ಬಳಿ ಪ್ರತಿಭಟನೆ
ನಡೆಸಿತು. ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡರೆಡ್ಡಿ ಹಳ್ಳಿ
ಬಸವ ರೆಡ್ಡಿ ಅವರು, ಮೊಳಕಾಲ್ಕೂರು ಪಟ್ಟಣದ ಬೀದಿಗಳಲ್ಲಿ
ಹಗಲು ಹೊತ್ತಿನಲ್ಲಿಯೇ ಬೀದಿ ದೀಪಗಳು ಉರಿಯುತ್ತಿವೆ. ಅಧಿಕೃತ
ಸಂಪರ್ಕ ಅಥವಾ ಮೀಟರ್ ಇಲ್ಲದೆ ಹೈ ಮಾಸ್ ಮತ್ತು ಎಲ್ ಇಡಿ
ದೀಪಗಳಿಗೆ ಸಂಪರ್ಕ ನೀಡಲಾಗಿದೆ ಎಂದು ಆರೋಪಿಸಿದರು.
ಇದಕ್ಕೆ ಸಂಬಂಧಪಟ್ಟವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ
ಅವರು ಆಗ್ರಹಿಸಿದರು.

