ಚಳ್ಳಕೆರೆ :
ಮನಸ್ಸನ್ನು ಕೇಂದ್ರೀಕರಿಸುವ ಶಕ್ತಿ ಇರುವುದು ದೇವಸ್ಥಾನಗಳಲ್ಲಿ ಮತ್ತು ಬುಡಕಟ್ಟು ಸಂಸ್ಕೃತಿಯಲ್ಲಿ ಇಲ್ಲಿಯ ಜನಗಳಲ್ಲಿ ಧಾರ್ಮಿಕ ಭಾವನೆ ಮನೆ ಮಾಡಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು.

ಗೌಡಗೆರೆ ಮತ್ತು ಜೋಗಿ ಹಟ್ಟಿ ಗ್ರಾಮದ ಲಕ್ಷ್ಮಿ ನರಸಿಂಹಸ್ವಾಮಿ ಮತ್ತು ರಂಗನಾಥ ಸ್ವಾಮಿಯ ಎದುರು ಗೂಡು ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿ ಈ ಭಾಗದ ಪ್ರತಿಯೊಬ್ಬರು ದೈವಿಕಾ ಆರಾಧನೆ ಮತ್ತು ಧಾರ್ಮಿಕ ಮನೋಭಾವ ಹೊಂದಿರುವಂತವರು ಸಮಾಜಕ್ಕೆ ಒಳಿತು ಬಯಸಿ ಇಂತಹ ಪೂಜೆ ಮತ್ತು ದೈವಿಕ ಆರಾಧನೆಯಲ್ಲಿ ಪಾಲ್ಗೊಳ್ಳುತ್ತೀರಿ ಸಮಾಜದಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆ ಬೆಳೆಯಬೇಕಾದರೆ ಇಂತಹ ಧಾರ್ಮಿಕ ಆಚರಣೆಗಳು ಮತ್ತು ದೈವರಾದನೆಗಳು ಹೆಚ್ಚು ಹೆಚ್ಚು ಕೈಗೊಳ್ಳಬೇಕು ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿವೆ ಈ ಭಾವನೆಗಳ ಜೊತೆ ಸಾಮಾಜಿಕ ಬದಲಾವಣೆಯ ಸಂಕಲ್ಪ ಕೈಗೊಳ್ಳಬೇಕಿದೆ ತಮ್ಮ ಮನೆಯಲ್ಲಿರುವ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಆಧ್ಯಾತ್ಮಿಕ ಶಿಕ್ಷಣದ ದಾರಿ ತೋರಿಸಬೇಕಿದೆ ಈ ಬಗ್ಗೆ ಇಂದು ದೀಕ್ಷೆ ಪಡೆಯಬೇಕೆಂದು ಹೇಳಿದರು

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಟೇಲ್ ಜಿ ತಿಪ್ಪೇಸ್ವಾಮಿ ಟಿ ಗೌಡ್ರು ಮಾತನಾಡಿ ಬುಡಕಟ್ಟು ಸಂಸ್ಕೃತಿ, ಶ್ರೀಮಂತವಾದ ಈ ಗ್ರಾಮದಲ್ಲಿ ಪೂರ್ವಿಕರ ಕಾಲದಿಂದಲೂ ಈ ದೈವರಾದನೆ ನಡೆಯುತ್ತಿದ್ದು ಈ ಸಂಸ್ಕೃತಿನೇ ಒಂದು ವಿಶಿಷ್ಟವಾಗಿದೆ ಇಲ್ಲಿಯ ಭಾಗದ ಜನರೆಲ್ಲರೂ ಸಾಮರಸ್ಯದ ಬದುಕನ್ನು ಕಟ್ಟಿಕೊಂಡಿದ್ದಾರೆ ದೈನಂದಿನ ಬದುಕಿನಲ್ಲಿ ಆಹಾರ ಊಟ ಬಿಟ್ಟರು ವ್ರತ ನಿಯಮ ಮತ್ತು ಭಕ್ತಿಯನ್ನು ಬಿಡುವುದಿಲ್ಲ ಬೇರೆಲ್ಲೂ ಕೂಡ ಇಂತಹ ಸಂಸ್ಕೃತಿಯನ್ನು ಕಾಣಲು ಸಾಧ್ಯವಿಲ್ಲ
ಎಂದು ಹೇಳಿದರು
ಈ ಸಂದರ್ಭದಲ್ಲಿ ಗೌಡಗೆರೆ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ರಂಗಪ್ಪ ಗುತ್ತಿಗೆದಾರರ ಬಿಜಿ ಗೋವಿಂದಪ್ಪ ಗ್ರಾಮ ಪಂಚಾಯಿತಿಯ ಹಾಲಿ ಅಧ್ಯಕ್ಷರು ಸದಸ್ಯರು ಮತ್ತು ಗುಡಿಕಟ್ಟಿನವರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!