ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿಪುಲೆ ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್ ಸುರೇಶ್.

ನಾಯಕನಹಟ್ಟಿ : ಪ್ರತಿಯೊಬ್ಬ ಶಿಕ್ಷಕರು ಸಾವಿತ್ರಿಬಾಯಿ ಫುಲೆ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಎಸ್ ಸುರೇಶ್ ಹೇಳಿದರು.

ಶನಿವಾರ ಪಟ್ಟಣದ ಶ್ರೀ ತಿಪ್ಪೇರುದ್ರಸ್ವಾಮಿ ದೇವಲಯದ ಒಳಮಠದ ಸಮುದಾಯ ಭವನ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಚಳ್ಳಕೆರೆ, ನಾಯಕನಹಟ್ಟಿ- ಹೋಬಳಿ ಶಿಕ್ಷಕರ ಬಳಗದಿಂದ ಮಾತೆ ಸಾವಿತ್ರಿ ಬಾಪುಲೆ ಜಯಂತಿ ಮತ್ತು ಶೈಕ್ಷಣಿಕ ಕಾರ್ಯಗಾರ – 2026 ಕಾರ್ಯಕ್ರಮವನ್ನು ಜೋತಿ ಬೆಳಗುವ ಉದ್ಘಾಟಿಸಿದರು.

ನಂತರ ಮಾತೆ ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಮಹಿಳಾ ಸಮುದಾಯಕ್ಕೆ ಶಿಕ್ಷಣ ಕಲಿಸುವ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಣದ ಪ್ರಗತಿಗೆ ಪ್ರೇರಣೆಯಾಗಿದ್ದಾರೆ. ಶತಮಾನಗಳಿಂದ ಮನಸ್ಮೃತಿಯ ಸುಳಿಯಲ್ಲಿ ಸಿಲುಕಿ ಶೋಷಣೆಗೆ ಒಳಗಾದ ಮಹಿಳೆಯರಿಗೆ ಅಕ್ಷರ ಉಣಪಡಿಸಿ ಸತಿ ಸಹಗಮನ ಪದ್ಧತಿಯನ್ನು ಧಿಕ್ಕರಿಸಿ ಅಸಮಾನತೆ ಅಸ್ಪೃಶ್ಯತೆಗಳೆಲ್ಲವನ್ನು ತೊಡೆದುಹಾಕಿ ಸಮಾಜಿಕ ಸಮಾನತೆ ಸಾರಿದ್ದಾರೆ ಎಂದರು.

ಉಪನ್ಯಾಸಕಿರಾದ ಶ್ರೀಮತಿ ತಾರಿಣಿ ಶುಭದಾಯಿನಿ, ಕೆ. ಲೀಲಾವತಿ ರವಿಕುಮಾರ್ ಮಾತೆ ಸಾವಿತ್ರಿಬಾಯಿ ಪುಲೆ ಅವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ. ಮಂಜುಳ ಶ್ರೀಕಾಂತ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಪಿ. ವೀರೇಶ್, ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ,ಬಿ ಆರ್ ಸಿ. ಎಚ್ ಪಿ ಮಂಜುಬಾಬು, ಸದಾಶಿವಯ್ಯ, ಶಿಕ್ಷಣ ಸಂಯೋಜಕ ಜೆ ತಿಪ್ಪೇಸ್ವಾಮಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಉಪಾಧ್ಯಕ್ಷ ಪಿ.ಎಂ. ವಿಶ್ವನಾಥ್, ಹೋಬಳಿ ಶಿಕ್ಷಕರ ಬಳಗದ ಅಧ್ಯಕ್ಷ ಬಿ ಎಚ್ ತಿಪ್ಪೇರುದ್ರಪ್ಪ, ಸಿಆರ್‌ಪಿಗಳಾದ ಜಿ ಪಾಲಯ್ಯ, ಸಿ .ಹೇಮಂತ್ , ಈಶ್ವರಪ್ಪ, ಲಿಂಗರಾಜ್ ಜಗನ್ನಾಥ್, ರಮೇಶ್, ನಾಗರಾಜ್, ಪ್ರಸನ್ನ ಕುಮಾರ್, ಮಂಜುನಾಥ್, ಹಾಗೂ ನಿವೃತ್ತ ಶಿಕ್ಷಕ ಸಿ ಬಿ ಉಮೇಶ್, ಸೇರಿದಂತೆ ಹೋಬಳಿಯ ಶಿಕ್ಷಕ – ಶಿಕ್ಷಕಿಯರು ಸಾರ್ವಜನಿಕರು ಇದ್ದರು.

About The Author

Namma Challakere Local News
error: Content is protected !!