ಚಳ್ಳಕೆರೆ : ಬೆಂಗಳೂರು ರಸ್ತೆಯಲ್ಲಿರುವ ನರಹರಿನಗರ ಹಾಲು ಉತ್ಪಾದಕರ ಸಹಕಾರ ಸಂಘ ದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಸಂಘದ ಆವರಣದಲ್ಲಿ. ದಿವ್ಯ ಸಾನಿಧ್ಯ ಪರಮಪೂಜ್ಯ ಶ್ರೀ ವೈ.ರಾಜಾರಾo ಸ್ವಾಮಿಗಳವರು ಓಂಕಾರಪೀಠಾಧ್ಯಕ್ಷರು ನರಹರಿನಗರ ಇವರ ಸಾನಿಧ್ಯದಲ್ಲಿ ಏರ್ಪಡಿಸಲಾಗಿತ್ತು.

ಅಧ್ಯಕ್ಷತೆಯನ್ನು ಶಿಮುಲ್ ನಿರ್ದೇಶಕರಾದ ಬಿ. ಸಿ.ಸಂಜೀವ ಮೂರ್ತಿ ರವರು ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ಹಾಲು ಉತ್ಪಾದಕರಿಂದ ಹಾಲಿನ ಉತ್ಪಾದನೆ ಸಂಘದ ಬೆಳವಣಿಗೆಯ ಹಾಗೂ ರಾಸುಗಳಿಗೆ ನೀಡುತ್ತಿರುವ ಮೇವು ಹಾಗೂ ಒಕ್ಕೂಟದಿಂದ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಉತ್ಪಾದಕರಿಗೆ ವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಎನ್. ವಿಶ್ವನಾಥ್ ಹಾಗೂ ಚಳ್ಳಕೆರೆ ಉಪ ವಿಭಾಗ ಸಹಾಯಕ ವ್ಯವಸ್ಥಾಪಕರಾದ ಎಂ. ಪುಟ್ಟರಾಜು ರವರು ಹಾಲು ಗುಣಮಟ್ಟ ಹಾಗು ಉತ್ಪಾದನೆ ದಿನದಿನಕ್ಕೂ ಹೆಚ್ಚಾದಕಾರಣ ಅಭಿವೃದ್ಧ ಹೊಂದಿದ ಸಂಘ ವಾಗಿದೆ ಎಂದರು.

ಹಿರಿಯೂರು ತಾಲೂಕು ಮಾರ್ಗ ವಿಸ್ತಾರಣದಿಕಾರಿಗಳಾದ ಎಸ್. ಜಿ. ಕೃಷ್ಣಕುಮಾರ್ ಹಾಗೂ ಜಿಲ್ಲಾ ಮಾರ್ಕೆಟಿಂಗ್ ವ್ಯವಸ್ಥಾಪಕರಾದ ಹನುಮಂತಪ್ಪ. ಡಾ. ಎಲ್. ಸತ್ಯನಾರಾಯಣ ಚೌದರಿ ಪಶು ವೈದ್ಯಾಧಿಕಾರಿಗಳು. ಹಾಗೂ ಸಂಘದ ನಿರ್ದೇಶಕರುಗಳು ಪುಲ್ಲಾರೆಡ್ಡಿ ಲಕ್ಷ್ಮಣ. ಮತ್ತು ಕಾರ್ತಿಕ್ ಎಸ್ ಮೂರ್ತಿ. ಶ್ರೀಮತಿ ನಾಗರತ್ನಮ್ಮ ಶಿವಣ್ಣ ಮಾರುತಿ. ಪುಷ್ಪ ತುಕರಾಮ್ ರೆಡ್ಡಿ ಬಸವರಾಜು ಸುರೇಶ್. ಗೋಪಿ. ಹಾಗು ಬನಶ್ರೀ ವೃದ್ದಾಶ್ರಮದ ಮಂಜುಳಮ್ಮನವರು.ಮತ್ತು ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಆರ್. ಸ್ವರೂಪ ಹಾಲು ಪರೀಕ್ಷಕರಾದ ಟಿ. ಕುಮಾರಸ್ವಾಮಿ ಹಾಗು ನರಹರಿ ನಗರ ಗ್ರಾಮದ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!