ಚಳ್ಳಕೆರೆ :
ಸಾವಿರಾರು ಹೋರಾಟಗಾರರು ದೇಶದ ರಾಷ್ಟ್ರ ನಾಯಕರು ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ಮುಡುಪಾಗಿ ಇಟ್ಟು ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿಸಿದರು ಎಂದು ಶಾಲೆಯ ಮುಖ್ಯ ಶಿಕ್ಷಕ R ನಾಗರಾಜ್ ಹೇಳಿದರು.
ಅವರು ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಡೆಹಟ್ಟಿ ನನ್ನಿವಾಳ ಕ್ಲಸ್ಟರ್ ನಲ್ಲಿ , 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು SDMC ಅಧ್ಯಕ್ಷರಾದ ಗೋವಿಂದರಾಜು ನೆರ್ವೇರಿಸಿಕೊಟ್ಟರು, ಶಾಲೆಯ ಮುಖ್ಯೋಪಾಧ್ಯಯರು ಸ್ವಾತಂತ್ರ್ಯ ದಿನಾಚರಣೆ ಕುರಿತು ಮಾತನಾಡಿದರು
ವ್ಯಾಪಾರಕ್ಕಾಗಿ ಬಂದ ಫ್ರೆಂಚರು ಡಚ್ಚರು, ಪೋರ್ಚುಗೀಸರು ಮುಂತಾದ ಪಶ್ಚಿಮತ್ಯ ಭಾರತದಲ್ಲಿನ ಅಪಾರ ಸಂಪತ್ತನ್ ಲೂಟಿ ಮಾಡಿದರು, ರಾಷ್ಟ್ರ ನಾಯಕರ ಹೋರಾಟದಿಂದ ಇಂದು ನಾವು ನೀವೆಲ್ಲರೂ ಬದುಕನ್ನು ನಿರ್ಬಿತಿಯಿಂದ ಬದುಕುತ್ತಿದ್ದೇವೆ ಎಂಬುದಾಗಿ ತಿಳಿಸಿದರು.
ಇದೇ ಸಂಧರ್ಭದಲ್ಲಿ ಶಾಲೆಯ ಸಹ ಶಿಕ್ಷಕ ಎಚ್. ಹನುಮಂತಪ್ಪ ಸ್ವಾತಂತ್ರ್ಯ ದಿನಾಚರಣೆ ಕುರಿತು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ
ಜಿ ತಿಪ್ಪೇಸ್ವಾಮಿ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗೀತಮ್ಮ, ಪಾಪಯ್ಯ ಗ್ರಾಮ ಪಂಚಾಯತ್ ಸದಸ್ಯರು, ಮಾಜಿ ಗ್ರಾಮ ಪಂಚಾಯಿತಿ, ಸದಸ್ಯರಾದ ಓಬಯ್ಯನವರು, ಹಾಗೂ ಮಾಜಿ ಅಧ್ಯಕ್ಷರಾದ ತೋಡ್ಲಾ ಪಾಲಯ್ಯನವರು, ಹಾಗೂ O ರಾಮಯ್ಯನವರು, ಮದಿಗೆರೆ ಬಸವರಾಜು, ರಾಜಣ್ಣ,ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯಾದ ಗಿರಿಜಾ ಮತ್ತು ಮುದುಕಲ ನಾಗರಾಜ್, ಯುವಕರಾದ J ತಿಪ್ಪೇಸ್ವಾಮಿ, ಪಾಪಯ್ಯ, ಅಭಿಷೇಕ್, ಸಿಂತ್ಲಮ್ಮ ವಿನೋದಮ್ಮ, ಮುಂತಾದವರು ಗ್ರಾಮಸ್ಥರೆಲ್ಲರೂ ಹಾಜರಾಗಿದ್ದರು, ರಾಷ್ಟ್ರ ನಾಯಕರ, ಹಾಗೂ ದೇಶಭಕ್ತಿ ಗೀತೆ, ಸೇರಿದಂತೆ ಶಾಲಾ ಮಕ್ಕಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲಾಯಿತು.

