ಚಿತ್ರದುರ್ಗ: ರಾಜ್ಯದಲ್ಲಿ ಸರ್ಕಾರ ನಿದ್ದೆಗೆ ಜಾರಿದೆ
ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು
ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳಿದ್ದರೂ ಕಾಂಗ್ರೆಸ್ ಸರ್ಕಾರ ನಿದ್ದೆ
ಮಾಡುತ್ತಿದೆ ಮತ್ತು ಅಧಿಕಾರದ ಕಿತ್ತಾಟದಿಂದ ಅಭಿವೃದ್ಧಿ ಕೆಲಸಗಳು
ಸಂಪೂರ್ಣವಾಗಿ ನಿಂತಿದೆ ಎಂದು ಚಿತ್ರದುರ್ಗದಲ್ಲಿ ಭಾನುವಾರ
ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಹೈಕಮಾಂಡ್ ಹಾಗೂ
ಎಐಸಿಸಿ ಅಧ್ಯಕ್ಷರೂ ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು
ಹೇಳಿದರು.

