ಚಿತ್ರದುರ್ಗ: ಗೃಹಲಕ್ಷ್ಮಿ ಸಹಕಾರಿ ಸಂಘಗಳ
ಮಾಡುವುದನ್ನು ಕೈ ಬಿಡಿ
ಚಿತ್ರದುರ್ಗದಲ್ಲಿ ಎನ್.ಆರ್.ಎಲ್.ಎಂ. ಯೋಜನೆ ರಾಜ್ಯ
ಮುಖಂಡರಾದ ವಿಂದ್ಯಾರಾಣಿ, ಗೃಹ ಲಕ್ಷ್ಮೀ ಯೋಜನೆಯಡಿ
ಸಹಕಾರಿ ಬ್ಯಾಂಕುಗಳ ಮೂಲಕ ಹಣ ವರ್ಗಾವಣೆ ಮಾಡುವ
ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ. ಈಗಾಗಲೇ
ಎನ್.ಆರ್.ಎಲ್.ಎಂ. ಯೋಜನೆಯಲ್ಲಿರುವ ಮಹಿಳೆಯರು
ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದಾರೆ.
ಸರ್ಕಾರದ ಈ ಕ್ರಮದಿಂದ ಸಂಘಗಳು ಒಡೆದುಹೋಗುವ ಸಾಧ್ಯತೆ
ಇದೆ ಎಂದು ಅವರು ಹೇಳಿದ್ದಾರೆ. ಆದ್ದರಿಂದ, ಸರ್ಕಾರ ಈ
ಯೋಜನೆಯನ್ನು ಕೈಬಿಡಬೇಕೆಂದು ಅವರು ಆಗ್ರಹಿಸಿದ್ದಾರೆ.

