ಚಳ್ಳಕೆರೆ :
ಚಳ್ಳಕೆರೆ: ಕುಡಿದ ಅಮಲಿನಲ್ಲಿ ಯುವಕನ ಮೇಲೆ
ಬೇಡಿನಿಂದ ದಾಳಿ
ಉರುಸ್ ವೇಳೆ ಯುವಕನೊಬ್ಬ ಕುಡಿದ ಅಮಲಿನಲ್ಲಿ ಇನ್ನೊಬ್ಬ
ಯುವಕನ ಮುಖಕ್ಕೆ ಬೇಡಿನಿಂದ, ದಾಳಿ ಮಾಡಿದ ಘಟನೆ
ಚಳ್ಳಕೆರೆಯ ಜಾಮೀಯ ಮಸೀದಿ ಬಳಿ ಶುಕ್ರವಾರ ನಡೆದಿದೆ.
ಆರೋಪಿ ಜುನೈದ್ ಅಜ್ಜರ್ ಆಲಿ ಎಂಬ ಯುವಕನಿಗೆ ಕ್ಷುಲ್ಲಕ
ಕಾರಣಕ್ಕೆ ಕುತ್ತಿಗೆಗೆ ಬೇಡಿನಿಂದ ದಾಳಿ ನಡೆಸಿದ್ದು, ತಪ್ಪಿ ಮುಖಕ್ಕೆ
ಬಿದ್ದಿದೆ. ಉರುಸ್ ವೇಳೆ ಅಜರ್ ಮೌಲಾ ಮತ್ತು ಜುನೈದ್ ನಡುವೆ
ಗಲಾಟೆ ನಡೆದಿದ್ದು, ಇದನ್ನು ಬಿಡಿಸಲು ಬಂದಿದ್ದ ಅಸ್ಕರ್ ಮೇಲೆ
ದಾಳಿ ಮಾಡಿದ್ದು, ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

