ಚಳ್ಳಕೆರೆ :ಮೊಳಕಾಲ್ಕೂರು: ಧರ್ಮಸ್ಥಳ ಅಭಿವೃದ್ಧಿ ಸಂಸ್ಥೆ ಕಾರ್ಯ
ಅನನ್ಯ
ಮೊಳಕಾಲ್ಕೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು,
ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿವೃದ್ಧಿ ಸಂಸ್ಥೆಯು ಮೊಳಕಾಲ್ಕೂರು
ತಾಲೂಕಷ್ಟೇ ಅಲ್ಲದೆ ಇಡೀ ರಾಜ್ಯದ ಪ್ರತಿ ಹಳ್ಳಿಯಲ್ಲೂ
ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ನೀಡುತ್ತಿರುವ ಒತ್ತು ಅನನ್ಯ
ಎಂದು ಶ್ಲಾಘಿಸಿದರು. ಮೊಳಕಾಲ್ಕೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ
ಗ್ರಾಮಾಭಿವೃದ್ಧಿಯಿಂದ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣೆ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವೀಯ
ನೆಲೆಗಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿ ಸರ್ಕಾರದ
ಒಂದು ಭಾಗವಾಗಿ ಸಂಸ್ಥೆ ಮುಂದುವರೆಯಬೇಕೆಂದರು.

