ಸಂಭ್ರಮ ಸಡಗರದಿಂದ ಮಾರಮ್ಮ ದೇವಿ ಹಬ್ಬ ಆಚರಣೆ
ಚಳ್ಳಕೆರೆ: ಮದ್ಯಕರ್ನಾಟಕ ಜನರ ಆರಾಧ್ಯ ದೇವತೆ ಗೌರ ಸಮುದ್ರ ಮಾರಮ್ಮ ದೇವಿಯ ಜಾತ್ರೆ ನೆಡೆದ ನಂತರ ತಾಲೂಕಿನಲ್ಲಿ ಒಂದು ತಿಂಗಳವರೆಗೆ ನನ್ನ ಗ್ರಾಮಗಳಲ್ಲಿ ಮಂಗಳವಾರ ದಿನದಂದು ಹಲವು ಕಡೆ ಇಡೀ ಗ್ರಾಮಗಳೇ ಸಂಭ್ರಮ ಸಡಗರದಿಂದ ಮಾರಮ್ಮ ದೇವಿಯ ಹಬ್ಬವನ್ನು ಆಚರಣೆ ಮಾಡುವ ಮೂಲಕ ದೇವಿ ಕೃಪೆಗೆ ಇಡೀ ಗ್ರಾಮವೇ ಸಾಕ್ಷಿಯಾಗಿದೆ.
ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಮಾರಮ್ಮ ದೇವಿ ಹಬ್ಬವನ್ನು ಮಂಗಳವಾರ ಬೆಳ್ಳಿಗೆಯಿಂದ ಸಂಜೆವರೆಗೆ ಆರತಿ ಬೆಳಗುವ ಮೂಲಕ ಚಿಕ್ಕ ಮಕ್ಕಳಿಗೆ ಗ್ರಾಮಸ್ಥರಿಗೆ ಯಾವುದೇ ರೀತಿಯ ರೋಗ ರುಜೂನೆಗಳು ಬರದಂತೆ ಗ್ರಾಮದಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಗ್ರಾಮಸ್ಥರು ದೇವಿಯಲ್ಲಿ ಪ್ರಾರ್ಥಿಸಿದರು.
ಗ್ರಾಮದಲ್ಲಿರುವ ಮಾರಮ್ಮ ದೇವಿಯ ದೇವಸ್ಥಾನವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕಾರವನ್ನು ಮಾಡಲಾಗಿದು. ಹೆಣ್ಣು ಮಕ್ಕಳು ವಿವಿಧ ಬಗೆಯ ಸೀರೆಗಳನ್ನು ಉಟ್ಟು ಅಕ್ಕಿ ಹಿಟ್ಟಿನ ಹರತಿಯನ್ನು ಹಿಡಿದುಕೊಂಡು ಪ್ರಮುಖ ಬೀದಿಯಲ್ಲಿ ಮೆರವಣಿಯನ್ನು ತಮಟೆ, ಉರುಮೆ ವಾದ್ಯಗಳೊಂದಿಗೆ ದೇವಸ್ಥಾನ ಮುಂಭಾಗ ಬಂದು ಸಾವಿರಾರು ಭಕ್ತರು ದೇವಿಗೆ ಆರತಿಯನ್ನು ಬೆಳಗಿ ಹಣ್ಣುಕಾಯಿ ಅರ್ಪಿಸಿ ಭಕ್ತಿ ಮರೆಯುತ್ತಾರೆ.
ವಿಜೃಂಭಣೆ ಮೆರವಣಿಗೆ: ಗ್ರಾಮದಿಂದ ಹೊರ ವಲಯದಲ್ಲಿ ಮಾರಮ್ಮ ದೇವಿಯ ಕಟ್ಟೆಯವರೆಗೆ ಉರುಮೆ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಹರತಿ ಇಡಿದುಕೊಂಡು ಸಲಾಗಿಸಾಗಿ ಆರತಿ ಬೆಳಗಿ ವಾಪಸು ಬಂದು ನಂತರ ಊರಿನ ಮದ್ಯಭಾಗದಲ್ಲಿ ಇರುವ ಊರ ಮಾರಮ್ಮನಿಗೆ ಆರತಿಯನ್ನು ಮುಖ್ಯ ರಸ್ತೆಯಲ್ಲಿ ಸಾಗಿ ಬರುವ ದೃಶ್ಯವನ್ನು ಗ್ರಾಮಸ್ಥರು ಭಕ್ತರು ಕಣ್ಣು ತುಂಬಿಸಿಕೊಂಡರು.

