ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣು ಹಾಲು ಬ್ರೆಡ್ ವಿತರಣೆ.
ದ್ರಾಕ್ಷಿ ಮತ್ತು ವೈನ್ ನಿಗಮ ಮಂಡಳಿ ಅಧ್ಯಕ್ಷ ಡಾ.ಬಿ ಯೋಗೇಶ್ ಬಾಬು ಹುಟ್ಟು ಹಬ್ಬದ ಪ್ರಯುಕ್ತ.
ನಾಯಕನಹಟ್ಟಿ: ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ದ್ರಾಕ್ಷಿ ಮತ್ತು ವೈನ್ ನಿಗಮ ಮಂಡಳಿ ಅಧ್ಯಕ್ಷ ಡಾ.ಬಿ ಯೋಗೇಶ್ ಬಾಬು ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳ ಬಳಗ ವತಿಯಿಂದ ಒಳ ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ ವಿತರಣೆ ಮೂಲಕ ಆಚರಣೆ ಮಾಡಿದರು.
ನಂತರ ಡಾ. ನಾಗರಾಜ್ ಮೀಸೆ ಮಾತನಾಡಿ ಮೊಳಕಾಲ್ಮೂರು ವಿಧಾನ ಸಭಾಕ್ಷೇತ್ರದಲ್ಲಿ ಸುಮಾರು ವರ್ಷಗಳಿಂದ ಜನಪರ ಕೆಲಸಗಳನ್ನು ಮಾಡಿಕೊಂಡು ಬಂದಿರುವ ಯುವನಾಯಕ ಮುಂದಿನ ದಿನಗಳಲ್ಲಿ ಈ ಕ್ಷೇತ್ರದ ಜನಪ್ರಿಯ ನಾಯಕರಾಗಲಿ ಎಂದು ದೇವರಲ್ಲಿ ಹಾರೈಸಿ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಮಲ್ಲೂರಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಕಾಟಯ್ಯ, ಗೌಡಗೆರೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ರಂಗಣ್ಣ, ಕರವೇ ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಜಾಗನೂರಹಟ್ಟಿ ಮುತ್ತಯ್ಯ, ಹೋಬಳಿ ಅಧ್ಯಕ್ಷ ಕೆ ಜಿ ಮಂಜುನಾಥ, ಹಸಿರು ಸೇನೆ ಹೋಬಳಿ ಅಧ್ಯಕ್ಷ ನಾಗರಾಜ್ ಮೀಸೆ, ಜಿಲ್ಲಾ ಕಾರ್ಯದರ್ಶಿ ನಮೀನ ಮದಕರಿ, ನಗರ ಘಟಕ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಮಧು ಕೋಲಮ್ಮನಹಳ್ಳಿ, ರಾಘವೇಂದ್ರ, ಪ್ರೇಮ,ಪ್ರವೀಣ್, ಆರ್ ಬಸವರಾಜ, ಇನ್ನೂ ಇತರರು ಇದ್ದರು.

