ಚಿತ್ರದುರ್ಗ ಜಿಲ್ಲೆಯಲ್ಲಿ ಬುಡಕಟ್ಟು ಸಂಸ್ಕೃತಿ ಆಚರಣೆ ಇನ್ನೂ ಜೀವಂತ ನಿಕಟಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ

ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ಸಮುದಾಯದ ಧಾರ್ಮಿಕ ಆಚರಣೆಗಳಿಗೂ ದ್ವಾಪರ ಯುಗದ ಆಚರಣೆಗಳಿಗೂ ಸಾಮ್ಯತೆ ಇದೆ ಎಂದು ಚಳ್ಳಕೆರೆ ನಿಕಟ ಪೂರ್ವ ತಹಸಿದ್ದಾರ ಎನ್ ರಘುಮೂರ್ತಿ ಹೇಳಿದರು.

ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಬೊಮ್ಮದೇವರ ಗಂಗಾ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬುಡಕಟ್ಟು ಸಮುದಾಯದ ವಿಶಿಷ್ಟ ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಸಾಮರಸ್ಯ ಶಾಂತಿ ಸಹನೆ ಮತ್ತೆ ಸಹಬಾಳ್ವೆಗೆ ದಾರಿಯಾಗುತ್ತವೆ ರಾಜ್ಯದ ಬೇರೆ ತಾಲೂಕುಗಳಿಗೆ ಹೋಲಿಸಿದರೆ ಅಪರಾಧ ಪ್ರಕರಣಗಳು ಈ ಭಾಗದಲ್ಲಿ ಕಡಿಮೆ ನಡೆಯುವಂತ ದುಷ್ಕೃತ್ಯಗಳು ಕಡಿಮೆ ಯುವಕರಲ್ಲಿ ಯುವತಿಯರಲ್ಲಿ ವಿಚ್ಛೇದ ಪ್ರಕರಣಗಳು ಕಡಿಮೆ ದರೋಡೆ ಪ್ರಕರಣಗಳು ಕಡಿಮೆ ಇದಕ್ಕೆಲ್ಲ ಕಾರಣ ಇಲ್ಲಿಯ ಧಾರ್ಮಿಕ ಆಚರಣೆಗಳು ಯುವಕರು ಇಂತಹ ಆಚರಣೆಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ಉನ್ನತ ಶಿಕ್ಷಣ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ಪಡೆಯಲು ಮುಂದಾಗ ಬೇಕೆಂದು ಮನವಿ ಮಾಡಿದರು.

ಇನ್ನೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪಟೇಲ್ ಜಿ.ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಮಾತನಾಡಿ ನನ್ನಿವಾಳದ ಕಟ್ಟೆಮನೆ ವಂಶಸ್ಥರು ಧಾರ್ಮಿಕ ಆಚರಣೆಯಲ್ಲಿ ವಿಶಿಷ್ಟವಾದ ಪರಂಪರೆಯೊಂದಿದ್ದಾರೆ ಇಲ್ಲಿಯ ಬುಡಕಟ್ಟು ಜನಾಂಗದವರು ಉಕೃಷ್ಟವಾದ ದೈವರಾಧನೆ ಆಚರಣೆ ಮಾಡುತ್ತಾರೆ ಯುವ ಪೀಳಿಗೆ ಇಂತಹ ಕೈಂಕರ್ಯ ರೂಡಿಸಿ ಕೊಳ್ಳಬೇಕೆಂದು ಹೇಳಿದರು.

ಇದೆ ವೇಳೆ ಮಾಜಿ ಪ್ರಧಾನರಾದ ದೊರೆ ಬೈಯಣ್ಣ ಮಾತನಾಡಿದರು ಬಿಜೆಪಿ ಕಾರ್ಯಕರ್ತರಾದ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!