ನಿಸ್ವಾರ್ಥ ಮತ್ತು ಪರೋಪಕಾರದ ಬದುಕು ಭಗವಂತನನ್ನು ಸಾಕ್ಷಿಕರಿಸಿಕೊಂಡಂತೆ ಎಂದು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಏನ್ ರಘುಮೂರ್ತಿ ಹೇಳಿದರು
ಅವರು ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ವಾಲ್ಮೀಕಿ ನಾಯಕ ಸಂಘವು ಆಯೋಜಿಸಿದ್ದಂತ ನಿವೃತ್ತ ಅಧಿಕಾರಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ ನಿವೃತ್ತಿ ಅನಿವಾರ್ಯವಾಧರು ಅದಮ್ಯವಾದ ಮತ್ತು ನಿಶ್ಚಲವಾದ ಮನಸ್ಸಿಗೆ ಯಾವುದೇ ನಿವೃತ್ತಿ ಇರುವುದಿಲ್ಲ ನಿಸ್ವಾರ್ಥತೆ ಪರೋಪಕರ ಮತ್ತು ಸಮಾಜ ಸೇವೆಯ ತುಡಿತ ಇದ್ದಲ್ಲಿ ನಿವೃತ್ತಿಯ ಕಲ್ಪನೆ ಜೀವನದ ಅಂತಿಮವರೆಗೂ ಸುಳಿಯುವುದಿಲ್ಲ ನಾನು ಮತ್ತು ನನ್ನ ಕುಟುಂಬ ಎನ್ನುವ ಮನಸ್ಥಿತಿಯಿಂದ ಹೊರಬಂದು ಬಡವರು ಅಸಹಾಯಕರು ಮತ್ತು ನೋವಿನಲ್ಲಿರುವವರ ಮುಖದಲ್ಲಿ ನಗು ತ ರಿಸುವಂತ ಕೈಂಕರ್ಯಕ್ಕೆ ಇಂದು ನನ್ನೊಳಗೊಂಡಂತೆ ನಾವೆಲ್ಲರೂ ಸೇರಿ ಸಂಕಲ್ಪ ಮಾಡೋಣ ಉನ್ನತ ಮಟ್ಟದ ಎಲ್ಲಾ ಅಧಿಕಾರಿಗಳು ನಮ್ಮಗಳ ದುಡಿಮೆಯ ಒಂದು ಅಂಶವನ್ನು ಸಮಾಜದಲ್ಲಿನ ಜನರಿಗೆ ಮೀಸಲಿಡೋಣ ಜೀವನ ಮತ್ತು ದೇಹ ಕೊನೆಗೆ ಅಂತ್ಯವಾಗುತ್ತದೆ ಈ ಅವಧಿಯಲ್ಲಿ ನಾವು ಮಾಡಿದಂತ ಸಮಾಜಕ್ಕೆ ನೀಡಿದಂತ ಕೆಲಸಗಳು ಶಾಶ್ವತವಾಗಿರುತ್ತದೆ ಸಮಾಜಕ್ಕೆ ಅಗತ್ಯವಿರುವ ಅದೆಷ್ಟೋ ಕೆಲಸಗಳು ನಮ್ಮ ಕಣ್ಮುಂದಿವೆ ಇದರಲ್ಲಿ ಒಂದೆರಡು ನಾವು ಆಯ್ಕೆ ಮಾಡಿಕೊಂಡು ಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ ಇತ್ತೀಚೆಗೆ ನಿವೃತ್ತಿಯಾಗಿರುವಂತ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ ಮತ್ತು ತಾಲೂಕ್ ಕಾರ್ಯನಿರ್ವಣಾಧಿಕಾರಿ ಜಾನಕಿ ರಾಮ್ ಉತ್ತಮವಾಗಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ್ದು ಇವರ ನಿವೃತ್ತಿ ಜೀವನ ಸುಖಕರವಾಗುವುದರ ಜೊತೆಗೆ ಸಮಾಜ ಸೇವೆಗೆ ತಮ್ಮನ್ನು ತಾವು ಮಡಿಪಾಗಿ ಇಡಲಿ ಎಂದು ಆಶಿಸಿದರು
ಸಮಾರಂಭದಲ್ಲಿ ಉಪಸ್ಥಿತರಿದಂತಹ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಯತ್ನಟ್ಟಿ ಗೌಡ್ರು ಪಟೇಲ್ ಜಿ ತಿಪ್ಪೆಸ್ವಾಮಿ ಮಾತನಾಡಿ ದೊಡ್ಡ ಉಳ್ಳರ್ತಿಗ್ರಾಮದ ಎಲ್ಲ ಜನಾಂಗದ ನಾಗರಿಕರು ಸುಸಂಸ್ಕೃತರು ಜಗನ್ಮಾತೆ ಗೌರಿ ದೇವಿಯ ಆರಾಧಕರು ಶ್ರದ್ಧೆ ನಿಷ್ಠೆಯಿಂದ ಪ್ರತಿ ವರ್ಷ ಈ ದೇವಿಯ ಜಾತ್ರೆಯಲ್ಲಿ ಈ ಕಾರ್ಯಕ್ರಮವನ್ನು ಅಯೋಜಿಸುವುದರೊಂದಿಗೆ ಸಮಾಜದಲ್ಲಿ ಮಾತೃತ್ವ ಮತ್ತು ಸಮನ್ವಯವನ್ನು ಕಾಪಾಡಿಕೊಂಡಿದ್ದಾರೆ ಇಡೀ ಗ್ರಾಮ ಯಾವುದೇ ದ್ವೇಷ ಸಂಘರ್ಷವಿಲ್ಲದೆ ಶಾಂತಿಯ ಪ್ರತಿಕವಾಗಿದೆ ಇಡೀ ತಾಲೂಕಿಗೆ ಈ ಗ್ರಾಮ ಒಂದು ಮಾದರಿಯಾಗಿದ್ದು ಮುಂದಿನ ದಿನಗಳಲ್ಲಿ ಇಂತಹ ಒಳ್ಳೆಯ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಆಶಿಸಿದರು
ವಾಲ್ಮೀಕಿ ನಾಯಕ ಸಮುದಾಯ ಅಧ್ಯಕ್ಷ ಜಗದೀಶ್ ನಿವೃತ್ತ ಕಾರ್ಯ ನಿರ್ವಹಣಾಧಿಕಾರಿ ಜಾನಕಿ ರಾಮ್ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜು ಬಿಜೆಪಿ ಮುಖಂಡ ರಘುನಾಥ್ ಚಂದ್ರಣ್ಣ ಯರ ಗುಂಟಪ್ಪ ಪುಟ್ಟಮ್ಮ ರಂಗಾರೆಡ್ಡಿ ಬೋರಯ್ಯ ಸಿದ್ದಪ್ಪ ಮುಂತಾದವರು ಉಪಸ್ಥಿತರಿದ್ದರು

