ಚಳ್ಳಕೆರೆ :
ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳಿ ಹಾಗೂ ಶಿಮುಲು ಹಾಲು ಒಕ್ಕೂಟದ ಸಹಯೋಗದಲ್ಲಿ ನಗರದ ನರಹರಿ ನಗರದಲ್ಲಿ
ಕಾಲುಬಾಯಿ ರೋಗ 8ನೇ ಸುತ್ತಿನ ಲಸಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಗೋಮಾತೆಗೆ ಪೂಜಿ ಸಲ್ಲಿಸಿ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಶಿಮುಲು ಹಾಲು ಒಕ್ಕೂಟದ ನಿರ್ದೇಶಕರಾದ ಬಿಸಿ.ಸಂಜೀವ ಮೂರ್ತಿ ಚಾಲನೆ ನೀಡಿದರು.
ಪಶು ಇಲಾಖೆಯ ಡಾ. ಶ್ರೀನಿವಾಸ್ ಬಾಬು ಕಾಲುಬಾಯಿ ರೋಗ ಅಭಿಯಾನ ಕುರಿತು ಸಮಗ್ರ ಮಾಹಿತಿ ನೀಡಿದರು. ನರಹರಿನಗರದ ಹಾಲು ಒಕ್ಕೂಟದ ಉಪಾಧ್ಯಕ್ಷರಾದ ವಿಶ್ವನಾಥ ಡಾ.ರಂಗಸ್ವಾಮಿ. ಸೇರಿದಂತೆ ಪಶು ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ನರಹರಿ ಪಶು ಸಾಕಾಣಿಕೆದಾರರು ಇದ್ದರು.

