ಚಳ್ಳಕೆರೆ: ನಗರದ ಠಾಣೆಯ ಸುತ್ತಮುತ್ತ ಇರುವಂತಹ ಕಸವನ್ನ ಗುಡಿಸುವ ಮೂಲಕ ಚಳ್ಳಕೆರೆ ಪೊಲೀಸರು ಸ್ವಚ್ಛತಾ ಕಾರ್ಯವನ್ನು ಮಾಡಿದರು.
ಚಳ್ಳಕೆರೆ ಪೊಲೀಸ್ ಇನ್ಸ್ಪೆಕ್ಟರ್ ಆರ್ ಎಫ್ ದೇಸಾಯಿ. ಹಾಗೂ ಪಿಎಸ್ಐಗಳಾದ ಶಿವರಾಜ್ ಮತ್ತು ಧರಪ್ಪ ಬಾಳಪ್ಪ ದೊಡ್ಮನಿ ಇವರ ನೇತೃತ್ವದಲ್ಲಿ ನಗರದ ಪೊಲೀಸ್ ಠಾಣೆಯ ಹಿಂಭಾಗ ಹಾಗೂ ಮುಂಬಾಗದಲ್ಲಿರುವಂತಹ ಕಸವನ್ನು ಸ್ವಚ್ಚಗೊಳಿಸುವ ಮೂಲಕ, ವರ್ಷಗಳಿಂದ ಅಪಘಾತಗಳಾಗಿ ಪ್ರಕರಣದಲ್ಲಿ ಇರುವಂತಹ ವಾಹನಗಳ ಮೇಲೆ ಧೂಳು ತೇಗೆಯಲು ನೀರು ಬಿಡುವ ಮೂಲಕ ಎಲ್ಲಾ ವಾಹನಗಳನ್ನು ಸ್ವಚ್ಛಗೊಳಿಸಿದರು.
ಈಗ ಮಳೆಗಾಲ ಆರಂಭವಾಗಿದ್ದು ನಮ್ಮ ಪೋಲೀಸ್ ಠಾಣೆಯ ಸುತ್ತಮುತ್ತಲಿನಲ್ಲಿ ಪ್ರಕರಣದಲ್ಲಿ ಇರುವಂತಹ ವಾಹನಗಳನ್ನು ನಿಲುಗಡೆ ಮಾಡಲಾಗಿರುವ ಸ್ಥಳಗಳಲ್ಲಿ ಮರದಿಂದ ಬೀಳುವಂತಹ ಎಲೆಗಳು ಇಲ್ಲಿ ಕೊಳೆತು ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚುತ್ತದೆ ಆದುದರಿಂದ ಇಂದು ನಾವೆಲ್ಲರೂ ಪೋಲೀಸ್ ಠಾಣೆ ಆವರಣವನ್ನ ಸ್ವಚ್ಛಗೊಳಿಸಿದ್ದೇವೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಆರ್. ಎಫ್ .ದೇಸಾಯಿ ತಿಳಿಸಿದರು…
ಈ ಸಂದರ್ಭದಲ್ಲಿ ಪಿಎಸ್ಐಗಳಾದ ಶಿವರಾಜ್ ,ಧರಪ್ಪ ದೊಡ್ಮನಿ ಸೇರಿದಂತೆ. ಪೊಲೀಸ್ ಪೇದೆಗಳು ಇದ್ದರು…

